ತಿನ್ನಲೆಂದು ಐಸ್ ಕ್ರೀಂ ಕೊಂಡರೆ ಅದರಲ್ಲೇನಿತ್ತು ಗೊತ್ತಾ?

Worms in Ice cream!

16-06-2018

ಬೆಂಗಳೂರು: ಪ್ರತಿಷ್ಠಿತ ಕಂಪನಿಯೊಂದರ ಐಸ್ ಕ್ರೀಂನಲ್ಲಿ ಹುಳುಗಳು ಕಾಣಿಸಿಕೊಂಡು ಐಸ್ ಕ್ರೀಂ ಪ್ರೀಯರ ಆತಂಕಕ್ಕೆ ಕಾರಣವಾಗಿರುವ ಘಟನೆ ನಡೆದಿದೆ. ನೆಲಮಂಗಲ ತಾಲ್ಲೂಕಿನ ಸೋಪುರ ಕೈಗಾರಿಕಾ ಪ್ರದೇಶದಲ್ಲಿ ಆಟೋದಲ್ಲಿ ಮಾರುತ್ತಿದ್ದ ಐಸ್ ಕ್ರೀಂನಲ್ಲಿ ಹುಳುಗಳು ಇರುವುದನ್ನು ಕಂಡು, ಐಸ್ ಕ್ರೀಂ ಪ್ರಿಯರು ಬೆಚ್ಚಿ ಬಿದ್ದಿದ್ದಾರೆ.

ಆಟೋದಲ್ಲಿ ಐಸ್ ಕ್ರೀಂ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾಗ, ಸ್ಥಳೀಯ ನಿವಾಸಿ ಮಂಗಳ ಎಂಬವರು, ತಮ್ಮ ಮಗಳಿಗಾಗಿ ಐಸ್ ಕ್ರೀಂ ಖರೀದಿಸಿದ್ದರು. ನಂತರ ಐಸ್ ಕ್ರೀಂ ಮುಚ್ಚಳ ತೆರೆದು ನೋಡಿದಾಗ ಹುಳುಗಳಿರುವುದು ಬೆಳಕಿಗೆ ಬಂದಿದೆ. ಕೂಡಲೇ ಸ್ಥಳೀಯರು ಆಟೋದಲ್ಲಿ ಐಸ್ ಕ್ರೀಂ ಮಾರಾಟ ಮಾಡುತ್ತಿದ್ದವರನ್ನು ತಡೆದು, ತರಾಟೆಗೆ ತೆಗೆದುಕೊಂಡಿದ್ದಾರೆ. ತುಮಕೂರು ಮೂಲದ ಕಂಪೆನಿಯ ಐಸ್ ಕ್ರೀಂ ಇದಾಗಿದ್ದು, ಪ್ರತಿಷ್ಠಿತ ಕಂಪೆನಿಯ ಐಸ್ ಕ್ರೀಂನಲ್ಲಿಯೇ ಹುಳುಗಳಿರವುದು ಆಕ್ರೋಶಕ್ಕೆ ಕಾರಣವಾಗಿದೆ.


ಸಂಬಂಧಿತ ಟ್ಯಾಗ್ಗಳು

Ice cream Worms ಕೈಗಾರಿಕಾ ಮುಚ್ಚಳ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ