ಅರಣ್ಯ ಸಿಬ್ಬಂದಿ ಕಿರುಕುಳ: ರೈತ ಆತ್ಮಹತ್ಯೆ!

Forest staff harassment: farmer suicides!

16-06-2018

ಬೆಳಗಾವಿ: ಅರಣ್ಯ ಇಲಾಖೆ ಸಿಬ್ಬಂದಿಗಳ ಕಿರುಕುಳಕ್ಕೆ ಬೇಸತ್ತು ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಬೆಳಗಾವಿ ತಾಲ್ಲೂಕಿನ ಶಿವಾಪುರ ಗ್ರಾಮದ ಬಸಪ್ಪಾ ಹುದ್ದಾರ(52) ಮೃತ ದುರ್ದೈವಿ. ಇಂದು ಬೆಳಗಿನ ಜಾವ ತಮ್ಮ‌ ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ನಿನ್ನೆಯಷ್ಟೆ ಅರಣ್ಯ ಇಲಾಖೆಯವರು ರೈತನ ಜಮೀನನ್ನು ವಶಪಡಿಸಿಕೊಂಡಿದ್ದರು. ಈ ಹಿಂದೆ ಅರಣ್ಯ ಇಲಾಖೆ ಕಾಯ್ದೆ ಹೆಸರಿನಲ್ಲಿ ಕಳೆದ ಒಂದು ವರ್ಷದ ಹಿಂದಷ್ಟೇ ಒಂದು ಎಕರೆ ಜಮೀನು ವಶಪಡಿಸಿಕೊಂಡಿತ್ತು. ಇದೀಗ ಉಳಿದ‌ ಜಮೀನನ್ನು ಮತ್ತೆ ವಶಪಡಿಸಿಕೊಂಡಿದ್ದಕ್ಕೆ ಮನನೊಂದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಅರಣ್ಯ ಪ್ರದೇಶದ ಭೂಮಿಯನ್ನು ಕಬಳಿಸಿ ಗ್ರಾಮಸ್ಥರು ವ್ಯವಸಾಯ ಮಾಡಿಕೊಂಡಿದ್ದಾರೆ, ಎಂಬ ಮಾತುಗಳು ಕೇಳಿ ಬರುತ್ತಿವೆ. ಇದರಿಂದ ಗ್ರಾಮದ ಬಹುತೇಕ ರೈತರ ಜಮೀನಿಗೆ ಕೈಹಾಕಿರುವ ಇಲಾಖೆ, ಅರಣ್ಯ ಇಲಾಖೆ‌ ಕಾಯ್ದೆಯಡಿ ಭೂಮಿಯನ್ನ ಮತ್ತೆ ಮರಳಿ ಪಡೆಯುತ್ತಿದ್ದಾರೆ. ಈ ಕುರಿತಂತೆ ಸಮಸ್ಯೆಗೆ ಪರಿಹಾರ ಒದಗಿಸಲು ಸ್ಥಳಕ್ಕೆ ಅರಣ್ಯ ಸಿಬ್ಬಂದಿಗಳು, ತಹಶೀಲ್ದಾರರು ಬರುವಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಕಾಕತಿ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ಸಂಬಂಧಿತ ಟ್ಯಾಗ್ಗಳು

forest police ಅರಣ್ಯ ಇಲಾಖೆ ಆತ್ಮಹತ್ಯೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ