ಸುತ್ತೂರು ಮಠಕ್ಕೆ ಪ್ರತಾಪ್ ಸಿಂಹ ಭೇಟಿ

Pratap has visited Suttur Mutt

16-06-2018

ಮೈಸೂರು: ಸುತ್ತೂರು‌ ಮಠಕ್ಕೆ‌ ಸಂಸದ‌ ಪ್ರತಾಪ್ ಸಿಂಹ ಭೇಟಿ ನೀಡಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಈ ವೇಳೆ, ಕೇಂದ್ರ ಸರ್ಕಾರದ ನಾಲ್ಕು ವರ್ಷದ ಸಾಧನೆಗಳ ಕಿರು ಹೊತ್ತಿಗೆಯನ್ನು ಶ್ರೀಗಳ ಮುಖಾಂತರ ‌ಬಿಡುಗಡೆ ಮಾಡಿಸಿದರು. ನಂತರದಲ್ಲಿ ಶ್ರೀಗಳಿಗೆ ಪುಸ್ತಕದಲ್ಲಿರುವ ಅಂಶಗಳನ್ನ ವಿವರಿಸಿದ್ದಾರೆ. ಪ್ರತಾಪ್ ಸಿಂಹ ಅವರಿಗೆ  ಶಾಸಕ ನಾಗೇಂದ್ರ, ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರು ಸಾಥ್ ನೀಡಿದರು.

ನಂತರದಲ್ಲಿ ಮಾತನಾಡಿದ ಪ್ರತಾಪ್ ಸಿಂಹ, ನಾಲ್ಕು ವರ್ಷದಲ್ಲಿ ಮೋದಿ ಸರ್ಕಾರ ಮೈಸೂರಿಗೆ ಏನು ಕೊಟ್ಟಿದೆ ಎಂಬುದನ್ನ ಪುಸ್ತಕದಲ್ಲಿ ವಿವರಿಸಿದ್ದೇನೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ 48 ವರ್ಷಗಳ ಕಾಲ ದೇಶಕ್ಕೆ‌ ಕೊಟ್ಟಿದ್ದೇನು? ಮೋದಿ ಸರ್ಕಾರ 48 ತಿಂಗಳು ದೇಶಕ್ಕೆ ಕೊಟ್ಟಿರುವುದನ್ನ ಹೋಲಿಕೆ ಮಾಡಿ ತಿಳಿಸಿದ್ದೇವೆ. ಮೈಸೂರು ಅಭಿವೃದ್ಧಿಗೆ ಪ್ರತಾಪ್ ಸಿಂಹ  ಏನು ಮಾಡಿದ್ದಾರೆ ಎಂಬುದನ್ನೂ ಸಹ ನಾಲ್ಕು ಪುಟದ ಕರಪತ್ರದಲ್ಲಿ ತಿಳಿಸಿದ್ದೇನೆ ಎಂದರು. ಮುಂಬರುವ ಲೋಕಸಭಾ ಚುನಾವಣೆಗೆ ಇಂದಿನಿಂದ ಪ್ರಚಾರವನ್ನು ಶುರು ಮಾಡುತ್ತಿದ್ದೇವೆ ಎಂದು ಪ್ರಕಟಿಸಿದರು.


ಸಂಬಂಧಿತ ಟ್ಯಾಗ್ಗಳು

Suttur Mutt   Pratap Simha ಪ್ರಚಾರ ಲೋಕಸಭಾ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ