‘ಬಿಜೆಪಿಯವರಿಗೆ ಮಾಡಲು ಬೇರೆ ಕೆಲಸವಿಲ್ಲ’- ಸಚಿವ ಶ್ರೀನಿವಾಸ್

"There is no other job for BJP said Minister Srinivas

16-06-2018

ಬೆಂಗಳೂರು: ಸರ್ಕಾರ ರೈತರ ಸಾಲಮನ್ನಾ ಮಾಡಿಲ್ಲ ಎಂದು ಆರೋಪಿಸಿ ಬೀದಿಗಿಳಿದಿರುವ ಬಿಜೆಪಿಯವರಿಗೆ ಮಾಡಲು ಬೇರೆ ಕೆಲಸವಿಲ್ಲ ಎಂದು ಸಣ್ಣ ಕೈಗಾರಿಕಾ ಸಚಿವ ಶ್ರೀನಿವಾಸ್ ಇಂದಿಲ್ಲಿ ವ್ಯಂಗ್ಯವಾಡಿದ್ದಾರೆ. ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ಬಿಜೆಪಿಯವರು ಹೋರಾಟ ಮಾಡದೇ ಬೇರೆ ಇನ್ನೇನು ಮಾಡಲು ಸಾಧ್ಯ. ಅವರಿಗೆ ಸಧ್ಯಕ್ಕೆ ಯಾವುದೇ ಕೆಲಸವಿಲ್ಲ. ಹೀಗಾಗಿ ಹೋರಾಟಕ್ಕೆ ಇಳಿದಿದ್ದಾರೆ ಎಂದರು.

ಬಿಜೆಪಿಯವರಿಗೆ ಯಾವುದಾದರೂ ಚುನಾವಣೆ ಇದ್ದಿದ್ದರೆ ಪ್ರಚಾರದಲ್ಲಿ ತೊಡಗುತ್ತಿದ್ದರು. ಆದರೆ ಸಧ್ಯಕ್ಕೆ ಚುನಾವಣೆಯೂ ಇಲ್ಲವಾಗಿದೆ. ರೈತರ 53 ಸಾವಿರ ಕೋಟಿ ಸಾಲಮನ್ನಾ ಮಾಡುವುದು ಹುಡುಗಾಟದ ವಿಷಯವಲ್ಲ. ಅದಕ್ಕೆ ಸೂಕ್ತ ಸಂಪನ್ಮೂಲ ಒದಗಿಸಬೇಕು. ಬಿಜೆಪಿ ಮುಖಂಡರಿಗೆ ಅರ್ಥ ಆಗುವುದಿಲ್ಲವೇ? ಎಂದು ಸಚಿವರು ತರಾಟೆಗೆ ತೆಗೆದುಕೊಂಡರು.


ಸಂಬಂಧಿತ ಟ್ಯಾಗ್ಗಳು

Loan waiver S.R.Srinivas ಸಣ್ಣ ಕೈಗಾರಿಕೆ ಹೋರಾಟ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ