14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ !

Kannada News

26-05-2017

ಬೆಂಗಳೂರು:- 14 ವರ್ಷದ ಬಾಲಕಿಯ ಮೇಲೆ ಮೂವರು ಕಾಮುಕರು ಅತ್ಯಾಚಾರವೆಸಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಏಳನೇ ತರಗತಿ ಓದುತ್ತಿರುವ ಬಾಲಕಿಯ ಮೇಲೆ ಕಾಮುಕರು ಆಟ್ಟಹಾಸ ಮೆರೆದಿದ್ದಾರೆ. ಮೂವರಲ್ಲಿ ಇಬ್ಬರು  ಅಪ್ರಾಪ್ತರಾಗಿದ್ದು, ಒಬ್ಬಾತ ಬಾಲಕಿ ಕುಟುಂಬಕ್ಕೆ ಪರಿಚಯಸ್ಥನಾಗಿದ್ದಾನೆ. ಮೇ ೮ ರಂದು ಬಾಲಕಿಯನ್ನ ಯಶವಂತಪುರಕ್ಕೆ ಸಿನಿಮಾ ನೋಡಲು ಕರೆದುಕೊಂಡು ಬಂದಿದ್ದ ಆರೋಪಿ, ರಾತ್ರಿ ೮-೩೦ ರ ನಂತರ ಬಾಲಕಿಗೆ ಮತ್ತು ಬರುವ ಜ್ಯೂಸ್ ಕುಡಿಸಿದ್ದಾನೆ. ನಂತರ ಪೀಣ್ಯದ ಪಾಳು ಬಿದ್ದ ಮನೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾರೆ. ನಂತರ ಸ್ನೇಹಿತರಿಗೆ ಕರೆ ಮಾಡಿ ಕರೆಸಿದ್ದು, ಅವರೂ ಸಹ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಘಟನೆಯ ನಂತರ ಸ್ಥಳದಿಂದ ಆರೋಪಿಗಳು ಪರಾರಿಯಾಗಿದ್ದಾರೆ. ರಾತ್ರಿ ೧೦-೩೦ರ ನಂತರ ಎಚ್ಚರಗೊಂಡ ಬಾಲಕಿ ಮನೆಗೆ ತೆರಳುವ ದಾರಿಯಲ್ಲಿ ಸಿಕ್ಕ ಸ್ನೇಹಿತೆ ಬಳಿ ನಡೆದ ವಿಚಾರವನ್ನೆಲ್ಲಾ ಹೇಳಿದ್ದಾಳೆ. ನಂತರ ಐದು ದಿನಗಳ ಕಾಲ ಸ್ನೇಹಿತೆಯ ಮನೆಯಲ್ಲೇ ಆಶ್ರಯ ಪಡೆದಿದ್ದಳು.  ಈ ನಡುವೆ ಬಾಲಕಿಯ ತಾಯಿ ಮಗಳು ನಾಪತ್ತೆಯಾಗಿರೊ ಬಗ್ಗೆ ಮಿಸ್ಸಿಂಗ್ ಕಂಪ್ಲೆಂಟ್ ನೀಡಿದ್ದರು, ಐದು ದಿನಗಳ ನಂತರ ಮನೆಗೆ ಹೋದ ಬಾಲಕಿ ನಡೆದ ವಿಚಾರ ತಾಯಿಗೆ ತಿಳಿಸಿದ್ದಾಳೆ. ಬಾಲಕಿ ತಾಯಿ ಮಗಳನ್ನು ಠಾಣೆಗೆ ಕರೆತಂದು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರು ಬಾಲಾಪರಾಧಿಗಳನ್ನು ಸೇರಿದಂತೆ ಮೂವರನ್ನ ಬಂಧಿಸಿದ್ದಾರೆ.

 

 


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ