ಕೆಪಿಸಿಸಿ ಅಧ್ಯಕ್ಷ ಸ್ಥಾನ: ರೇಸ್ ನಲ್ಲಿ ಮತ್ತೊಂದು ಹೆಸರು!

KPCC chairman: one more name added!

15-06-2018

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ ಆರಂಭವಾಗಿರುವ ಬೆನ್ನಲ್ಲೇ ಈ ಹುದ್ದೆಗಾಗಿ ಇದೀಗ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರ ಹೆಸರು ರೇಸ್‍ನಲ್ಲಿ ಕೇಳಿ ಬಂದಿದೆ. ಒಕ್ಕಲಿಗ ಸಮುದಾಯಕ್ಕೆ ಪಕ್ಷದ ಅಧ್ಯಕ್ಷ ಸ್ಥಾನ ನೀಡಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗಲಿದೆ. ವಕ್ಕಲಿಗ ಸಮುದಾಯಕ್ಕೆ ಆದ್ಯತೆ ನೀಡುವುದಾರೆ ತಮಗೆ ಅಧ್ಯಕ್ಷ ಪದ ನೀಡಬೇಕೆಂದು ಜಯಚಂದ್ರ ಪಟ್ಟು ಹಿಡಿದಿದ್ದಾರೆ.

ಪಕ್ಷದ ಅಧ್ಯಕ್ಷ ಗಾದಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ದಿನೇಶ್‍ ಗುಂಡೂರಾವ್, ಎಸ್.ಆರ್.ಪಾಟೀಲ್, ಎಂ.ಬಿ.ಪಾಟೀಲ್ ಅವರ ಹೆಸರುಗಳು ಕೇಳಿ ಬರುತ್ತಿರುವಾಗಲೇ ಜಯಚಂದ್ರ ಅವರ ಹೆಸರು ಸಹ ಕೇಳಿ ಬಂದಿದೆ. ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರ್ ಅವರನ್ನು ಉಪಮುಖ್ಯಮಂತ್ರಿ ಮಾಡಬೇಕು ಎಂಬ ಬೇಡಿಕೆ ಇತ್ತು. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೂ ಅವರ ಹೆಸರು ಕೇಳಿ ಬಂದಿತ್ತು. ಇದ್ಯಾವುದೂ ಸಾಧ್ಯವಾಗಿಲ್ಲ. ಇದೀಗ ಜಯಚಂದ್ರ ಹೆಸರು ಮುನ್ನಲೆಗೆ ಬಂದಿದೆ ಎನ್ನಲಾಗಿದೆ.

ಆದರೆ ಉಪಮುಖ್ಯಮಂತ್ರಿ ಹುದ್ದೆಯನ್ನು ತುಮಕೂರು ಜಿಲ್ಲೆಯವರಾದ ಡಾ.ಜಿ.ಪರಮೇಶ್ವರ್ ಅವರಿಗೆ ನೀಡಲಾಗಿದೆ. ಅವರೇ ಎಂಟು ವರ್ಷ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಹೀಗಿರುವಾಗ ಜಯಚಂದ್ರ ಹೆಸರು ಚರ್ಚೆಗೆ ಬಂದಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಅದರಲ್ಲಿ ಕೋಲಾರ ಜಿಲ್ಲೆಯ ಕೆಎಚ್.ಮುನಿಯಪ್ಪ ಹೆಸರು ಕೇಳಿಬಂದಿತ್ತು
  • ಆರ್. ವಿ.ಕೃಷ್ಣ ಭದ್ರಾವತಿ
  • Professional