6 ಮಂದಿ ಸರಗಳ್ಳರು: 29 ಪ್ರಕರಣಗಳು

6 chain snatchers: 29 cases

15-06-2018

ಬೆಂಗಳೂರು: ಒಂಟಿ ಮಹಿಳೆಯರ ಸರಗಳವು ಮಾಡುತ್ತಿದ್ದ ಇಬ್ಬರು ಹಾಗೂ ಬಸ್‍ಗಳಲ್ಲಿ ಪ್ರಯಾಣಿಕರಂತೆ ಸಂಚರಿಸಿ ಚಿನ್ನಾಭರಣ, ಹಣ ಇರುವ ಬ್ಯಾಗ್‍ಗಳನ್ನು ದೋಚುತ್ತಿದ್ದ ಐನಾತಿ ದಂಪತಿ ಸೇರಿ ನಾಲ್ವರು ಒಳಗೊಂಡತೆ 6 ಮಂದಿ ಕುಖ್ಯಾತ ಕಳ್ಳರನ್ನು ಬಂಧಿಸಿ ಭರ್ಜರಿ ಬೇಟೆಯಾಡಿರುವ ಪಶ್ಚಿಮ ವಿಭಾಗದ ಪೊಲೀಸರು 1ಕೆಜಿ 120ಗ್ರಾಂ. ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಕಿರಣ್‍ಕುಮಾರ್ ಅಲಿಯಾಸ್ ಕಿರಣ್ (20), ವಿಶ್ವ (20), ಬಂಧಿತ ಸರಗಳ್ಳರಾದರೆ ನಾಗರಾಜ(46), ಗಿರೀಶ್ ಕುಮಾರ್ ಅಲಿಯಾಸ್ ಗಿರೀಶ (26)ಆತನ ಪತ್ನಿ ಜ್ಯೋತಿ (30)ಮನುಕುಮಾರ್ ಅಲಿಯಾಸ್ ಮನು (29), ಬಂಧಿತ ಕಳ್ಳರಾಗಿದ್ದಾರೆ.

ಬಂಧಿತರು ದೋಚುತ್ತಿದ್ದ ಚಿನ್ನಾಭರಣಗಳನ್ನು ಖರೀದಿಸುತ್ತಿದ್ದ ದೇವರಾಂ (55) ಹಾಗೂ ದಿನೇಶ್ ಕುಮಾರ್ (27)ನನ್ನು ಬಂಧಿಸಿ 33 ಲಕ್ಷ 59 ಸಾವಿರ ಮೌಲ್ಯದ 1 ಕೆಜಿ 120 ಗ್ರಾಂ ಚಿನ್ನ, 1 ಮೊಬೈಲ್ ವಶಪಡಿಸಿಕೊಂಡು 29 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಡಿಸಿಪಿ ರವಿ ಚೆನ್ನಣ್ಣನವರ್ ತಿಳಿಸಿದ್ದಾರೆ.

ನಿರ್ಜನ ಪ್ರದೇಶಗಳಲ್ಲಿ ಒಂಟಿಯಾಗಿ ಓಡಾಡುವ ಮಹಿಳೆಯರನ್ನು ಗುರಿಯಾಗಿಸಿಕೊಂಡು ಬೈಕ್‍ನಲ್ಲಿ ಸಂಚರಿಸುತ್ತ  ಮಾಂಗಲ್ಯ ಸರ ದೋಚಿ ಪರಾರಿಯಾಗುತ್ತಿದ್ದ ಬಂಧಿತ ಆರೋಪಿಗಳಾದ ಕಿರಣ್ ಕುಮಾರ್ ಹಾಗೂ ವಿಶ್ವಾಸ್‍ನಿಂದ 12 ಲಕ್ಷ 24 ಸಾವಿರ ಮೌಲ್ಯದ 408ಗ್ರಾಂ. ಚಿನ್ನಾಭರಣಗಳು ಹಾಗೂ ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸರಗಳ್ಳರ ಪತ್ತೆಗಾಗಿ ರಚಿಸಲಾಗಿದ್ದ ಉಪ್ಪಾರಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಉಮಾಮಹೇಶ್ ನೇತೃತ್ವದ ವಿಶೇಷ ತಂಡ ಆರೋಪಿಗಳನ್ನು ಬಂಧಿಸಿ ತನಿಖೆ ಕೈಗೊಂಡಿದೆ. ಇವರಿಬ್ಬರ ಬಂಧನದಿಂದ ಆರ್‍ಆರ್ ನಗರದ 3, ಜ್ಞಾನಭಾರತಿ-ಚಂದ್ರಲೇಔಟ್‍ನ ತಲಾ 2, ವಿಜಯನಗರ-ಕಾಮಾಕ್ಷಿಪಾಳ್ಯ, ಸುಬ್ರಮಣ್ಯಪುರ, ಉಪ್ಪಾರಪೇಟೆಯ ತಲಾ 1 ಸೇರಿದಂತೆ 12 ಪ್ರಕರಣಗಳು ಪತ್ತೆಯಾಗಿವೆ ಎಂದು ಅವರು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Chain snatch case ಒಂಟಿ ಮಹಿಳೆ ನಿರ್ಜನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ