ಸಿಸಿಟಿವಿ ಕ್ಯಾಮೆರಾ ಕಡ್ಡಾಯ: ಬಾರ್ ಮಾಲೀಕರು ಗರಂ!

CCTV Camera Mandatory: Bar Owners opposed new orders!

15-06-2018

ಬೆಂಗಳೂರು: ಪಾರ್ಸಲ್ ಜೊತೆ ಮದ್ಯ ಸೇವೆನೆಗೆ ಅವಕಾಶ ನೀಡುವ ಅಕ್ರಮಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಅಬಕಾರಿ ಇಲಾಖೆಯು ರಾಜ್ಯ ಎಲ್ಲಾ  ವೈನ್ ಶಾಪ್‍ಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮಾರಗಳನ್ನು ಅಳವಡಿಸಬೇಕು ಎನ್ನುವ ಆದೇಶ ಹೊರಡಿಸಿದೆ.

ವೈನ್‍ಶಾಪ್‍ನಲ್ಲಿ ಪಾರ್ಸೆಲ್ ಕೊಡುವುದರ ಜೊತೆ ಅಲ್ಲೇ ಅಕ್ರಮವಾಗಿ ಮದ್ಯ ಸೇವನೆಗೆ ಅವಕಾಶ ಕಲ್ಪಿಸುವ ಅಕ್ರಮಕ್ಕೆ ಕಡಿವಾಣ ಹಾಕಲು ರಾಜ್ಯದ ಎಲ್ಲ ಮದ್ಯಂದಂಗಡಿಯಲ್ಲೂ ಇನ್ನು ಮುಂದೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ಇಲಾಖೆಯ ಆಯುಕ್ತ ಮನೀನ್ ಮೌದ್ಗೀಲ್ ಆದೇಶ ಮಾಡಿದ್ದಾರೆ.

ಒಂದು ವೇಳೆ ಅಬಕಾರಿ ಇಲಾಖೆಯ ಆದೇಶವನ್ನು ಮೀರಿ ಸಿಸಿಟಿವಿ ಅಳವಡಿಸದಿದ್ದರೆ, ಅಂತಹ ಶಾಪ್ ಗಳ ಪರವಾನಗಿಯನ್ನು ನವೀಕರಣ ಮಾಡುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಅಬಕಾರಿ ಆಯುಕ್ತರ ನಿರ್ಧಾರಕ್ಕೆ ಬಾರ್ ಮಾಲೀಕರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ ಅಬಕಾರಿ ಇಲಾಖೆ ಕಠಿಣ ಕಾಯ್ದೆಗಳನ್ನು ತರುತ್ತಿದೆ. ಹೆಚ್ಚಿನ ಆದಾಯವನ್ನು ನಿರೀಕ್ಷೆ ಮಾಡುತ್ತಾರೆ. ಈ ರೀತಿ ಹೊಸ ಕಾಯ್ದೆಗಳನ್ನು ತಂದು ತೊಂದರೆ ಕೊಡುತ್ತಿದ್ದಾರೆ. ಅಕ್ರಮಕ್ಕೆ ಕಡಿವಾಣ ಹಾಕುವುದೆಂದರೆ ಈ ರೀತಿ ತೊಂದರೆಗಳನ್ನು ಕೊಡುವುದಲ್ಲ ಅಂತ ಬಾರ್ ಮಾಲೀಕರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.


ಸಂಬಂಧಿತ ಟ್ಯಾಗ್ಗಳು

Bar Resturant ಕ್ಯಾಮೆರಾ ಆಯುಕ್ತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ