ಕೇವಲ 15 ಸಾವಿರಕ್ಕಾಗಿ ಇದೆಂಥಾ ನೀಚ ಕೃತ್ಯ

just for 15 thousand and for gold a man killed a lady!

15-06-2018

ಬೆಂಗಳೂರು: ಹದಿನೈದು ಸಾವಿರ ಹಣ ಮತ್ತು ಚಿನ್ನಾಭರಣದ ಆಸೆಗಾಗಿ ಸಾಕಿ ಸಲಹಿದ ದೊಡ್ಡಮ್ಮನನ್ನೇ ಕೊಲೆ ಮಾಡಿ ಮಗ ಪರಾರಿಯಾಗಿರವ ಮೃಗೀಯ ಕೃತ್ಯ ಬಾಗಲೂರಿನಲ್ಲಿ ನಿನ್ನೆ ತಡರಾತ್ರಿ ನಡೆದಿದೆ.

ಬಾಗಲೂರಿನ ಮುನಿಯಮ್ಮ (78)ನನ್ನು ತಲೆ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ ಮಾಂಗಲ್ಯಸರ, ಉಂಗುರ, 15 ಸಾವಿರ ನಗದು ದೋಚಿ ಪರಾರಿಯಾಗಿರುವ ತಂಗಿ ಮಗ ಗಣೇಶ(40)ನ ಬಂಧನಕ್ಕೆ ಬಾಗಲೂರು ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.

ಇಬ್ಬರು ಹೆಣ್ಣು ಮಕ್ಕಳಿಗೆ ವಿವಾಹ ಮಾಡಿ ಕಳುಹಿಸಿದ್ದ ಮುನಿಯಮ್ಮ ಪತಿ ಸಾವಿನ ನಂತರ ಮಗ ಲಕ್ಷ್ಮಣ ಜೊತೆ ವಾಸಿಸುತ್ತಿದ್ದು, ಕೆಲ ದಿನಗಳ ಹಿಂದೆ ಲಕ್ಷ್ಮಣ ದೂರ ಮನೆ ಮಾಡಿಕೊಂಡಿದ್ದರು. ಅಲ್ಲಿಂದ ಒಂಟಿಯಾಗಿದ್ದ ಮುನಿಯಮ್ಮನ ಮನೆಗೆ ಆಗಾಗ ಆಕೆಯ ತಂಗಿ ಬಂದು ಹೋಗುತ್ತಿದ್ದರು.

ರಾತ್ರಿ ವೇಳೆ ಕೂಡ ಮುನಿಯಮ್ಮನ ಜೊತೆ ತಂಗಿ ಮಲಗಲು ಬರುತ್ತಿದ್ದರು ತಡವಾಗಿ ರಾತ್ರಿ 12ರ ವೇಳೆ ತಂಗಿ ಬಂದು ನೋಡಿದಾಗ ಮುನಿಯಮ್ಮ ಮೃತಪಟ್ಟಿದ್ದು, ಕತ್ತಿನಲ್ಲಿದ್ದ ಮಾಂಗಲ್ಯಸರ, ಕಿವಿ ಓಲೆ,ಉಂಗುರ ಕಾಣಿಸಲಿಲ್ಲ. ಆತಂಕಗೊಂಡ ತಂಗಿ, ಕೂಡಲೇ ಅಕ್ಕನ ಮಗ ಲಕ್ಷ್ಮಣನನ್ನು ಕರೆಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

15 ಸಾವಿರಕ್ಕೆ ಕೃತ್ಯ: ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ ಮುನಿಯಮ್ಮ ಅವರನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಕಂಡು ಬಂದಿದೆ.

ಮುನಿಯಮ್ಮ ನಿನ್ನೆ ಬ್ಯಾಂಕ್‍ನಿಂದ ಹದಿನೈದು ಸಾವಿರ ಹಣ ಡ್ರಾ ಮಾಡಿಕೊಂಡು ಬಂದಿದ್ದರು. ಈ ವಿಚಾರವನ್ನು ಹೆಣ್ಣೂರಿಗೆ ಹೋಗಿದ್ದ ತನ್ನ ತಂಗಿ ಅಂದರೆ ಗಣೇಶ್ ತಾಯಿಯ ಬಳಿ ಫೋನ್ ಮೂಲಕ ಹೇಳಿಕೊಂಡಿದ್ದರು. ಇದನ್ನು ಕೇಳಿಸಿಕೊಂಡಿದ್ದ ಗಣೇಶ್ ತಾಯಿ ದೊಡ್ಡಮ್ಮನ ಮನೆಗೆ ಹೋಗುವ ಮುನ್ನ ರಾತ್ರಿ ಹೆಣ್ಣೂರಿನ ತನ್ನ ಮನೆಯಿಂದ ದೊಡ್ಡಮ್ಮನ ಮನೆಗೆ ಹೋಗಿದ್ದ. ಮೊದಲು ಹಣ ನೀಡುವಂತೆ ಗಲಾಟೆ ಮಾಡಿದ್ದು ಹಣ ಕೊಡಲು ನಿರಾಕರಿಸಿ ರಕ್ಷಣೆಗೆ ಕೂಗಿಕೊಂಡಾಗ ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಮನೆಯಲ್ಲಿದ್ದ ಹದಿನೈದು ಸಾವಿರ ಹಣ, ಮಾಂಗಲ್ಯ ಸರ,ಉಂಗುರ ಕಿವಿಯಯೊಲೆ ದೋಚಿ ಪರಾರಿಯಾಗಿದ್ದಾನೆ.

ಸ್ಥಳಕ್ಕೆ ಧಾವಿಸಿ ವಿಚಾರಣೆ ನಡೆಸಿದ ಪೊಲೀಸರಿಗೆ ಮುನಿಯಮ್ಮನ ತಂಗಿಯ ಮಗ ಗಣೇಶ ಚಿನ್ನ ಹಾಗೂ ಹಣದ ಆಸೆಗಾಗಿ ಈ ಕೃತ್ಯವೆಸಗಿದ್ದಾನೆ ಎಂದು ತಿಳಿದುಬಂದಿದೆ. ಕೊಲೆ ಮಾಡಿದ ನಂತರ ಗಣೇಶ್ ಪರಾರಿಯಾಗಿದ್ದು, ಆತನಿಗಾಗಿ ತೀವ್ರ ಶೋಧ ನಡೆಸಲಾಗಿದೆ. ಗಣೇಶನ ಬಂಧನದ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಈಶಾನ್ಯ ವಿಭಾಗ ಡಿಸಿಪಿ ಕಲಾ ಕೃಷ್ಣಸ್ವಾಮಿ ಅವರು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Murede Lady ಮಾಂಗಲ್ಯ ಈಶಾನ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ