ಬ್ಲಾಕ್ ಮೇಲ್: ಯುವತಿ ಮೇಲೆ ಹಲವು ಬಾರಿ ಅತ್ಯಾಚಾರ!

Rape on a girl many times at haveri!

15-06-2018

ಹಾವೇರಿ: ಮದುವೆ ಆಗುವುದಾಗಿ ನಂಬಿಸಿ ಯುವಕನೊಬ್ಬ ಯುವತಿಗೆ ಮೋಸ ಮಾಡಿರುವ ಘಟನೆ, ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಅಕ್ಕಿಆಲೂರಿನಲ್ಲಿ ನಡೆದಿದೆ. ಮಂಜುರ ಇಲಾಹಿ(30) ಮೋಸ ಮಾಡಿದ ಯುವಕ. ಮೊಬೈಲ್ ರೀಪೇರಿ ಅಂಗಡಿ ಮಾಲೀಕನಾಗಿದ್ದ ಮಂಜುರ ಇಲಾಹಿ, ಅದೇ ಗ್ರಾಮದ ಶಬಾಸ ಮುಲ್ಲಾ ಎಂಬ ಯುವತಿ ತನ್ನ ಮೊಬೈಲ್ ರಿಪೇರಿಗೆಂದು ಹೋದಾಗ ಇಬ್ಬರ ನಡುವೆ ಪರಸ್ಪರ ಪರಿಚಯವಾಗಿದೆ.

ನಂತರ ಯವತಿಗೆ ವಾಟ್ಸಾಪ್ ಮೂಲಕ ಹಲವಾರು ದಿನ ಸಂದೇಶಗಳನ್ನು ಕಳುಹಿಸಿ, ಕೊನೆಗೆ ಪ್ರೀತಿ ಮಾಡುವುದಾಗಿ ಹೇಳಿ ನಂಬಿಸಿದ್ದಾನೆ. ಇದಾದ ನಂತರ ಮನೆಗೆ ಕರೆದುಕೊಂಡು ಹೋಗಿ ‌ಯುವತಿ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ದೈಹಿಕ ಸಂಪರ್ಕದ ವೀಡಿಯೋ ಚಿತ್ರೀಕರಿಸಿ ಯುವತಿಗೆ ಬ್ಲಾಕ್ ಮೇಲ್ ಮಾಡಲು ಶುರುಮಾಡಿಕೊಂಡಿದ್ದ.

ಹೀಗೆಯೇ ಹಲವು ಹೋಟೆಲ್ ರೂಮ್ ಗಳಿಗೆ ಕರೆದುಕೊಂಡು ಹೋಗಿ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಮದುವೆಗೆ ಯವತಿ ಒತ್ತಾಯಿಸುತ್ತಿದ್ದಂತೆ ಇಲ್ಲ ಸಲ್ಲದ ಸಬೂಬು ಹೇಳಿ, ಪರಾರಿಯಾಗಿದ್ದಾನೆ. ಇನ್ನು ನ್ಯಾಯಕ್ಕಾಗಿ ಯುವತಿ ಪೋಲಿಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಾಗಿ  ಹುಡುಕಾಟ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Rape Mobile ಬ್ಲಾಕ್ ಮೇಲ್ ವೀಡಿಯೋ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ