ಕೆರೆಯಲ್ಲಿ ಮತ್ತಿಬ್ಬರ ಶವ ಪತ್ತೆ!

Another 2 dead bodies found in a lake at kolar

15-06-2018

ಕೋಲಾರ: ಕೌಟುಂಬಿಕ ಕಲಹ ಹಿನ್ನೆಲೆ ನಿನ್ನೆ ಮಾಲೂರು ತಾಲ್ಲೂಕಿನ ತೋಟಗೌಡನಹಳ್ಳಿ ಕೆರೆಯಲ್ಲಿ ಪಾರ್ವತಮ್ಮ ಎಂಬುವುವರು ತನ್ನ ಮೂವರು ಮಕ್ಕಳೊಂದಿಗೆ ಕೆರೆಗೆ ಬಿದ್ದು ಆತ್ಮಹತ್ಯೆ ‌ಮಾಡಿಕೊಂಡಿದ್ದರು. ಪಾರ್ವತಮ್ಮ(25) ಹಾಗೂ ಮಗ ಅಕ್ಷಯ್  ಕುಮಾರ್ (3) ಅವರ ಮೃತ ದೇಹಗಳು ನಿನ್ನೆ ಪತ್ತೆಯಾಗಿತ್ತು. ಇನ್ನಿಬ್ಬರಿಗಾಗಿ ಶೋಧ ಕಾರ್ಯ ಮುಂದುವರೆಸಲಾಗಿತ್ತು, ಇದೀಗ ‌ಮಕ್ಕಳಾದ ಜೀವನ್ (7), ಚಂದನ (5) ಅವರ ಶವಗಳು ಕೆರೆಯಲ್ಲಿ ಪತ್ತೆಯಾಗಿವೆ. ನಕ್ಕನಹಳ್ಳಿ ಗ್ರಾಮದ ಮಂಜುನಾಥ್ ಎಂಬುವರ ಪತ್ನಿ ಹಾಗೂ ಮಕ್ಕಳು ಸಾವನ್ನಪ್ಪಿದ್ದಾರೆ. ಘಟನೆಯಿಂದ ಪಾರ್ವತಮ್ಮ ಪೋಷಕರು ಮಗಳನ್ನು, ಮೊಮ್ಮಕ್ಕಳನ್ನು ಕಳೆದುಕೊಂಡು ಕಣ್ಣೀರಲ್ಲಿ ಕೈತೊಳೆಯವಂತಾಗಿದೆ. ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ಸಂಬಂಧಿತ ಟ್ಯಾಗ್ಗಳು

suicide family ಮೃತ ದೇಹ ಶೋಧ ಕಾರ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ