ಸಾರಿಗೆ ಇಲಾಖೆಗೆ ಲಕ್ಷ-ಲಕ್ಷ ಪಂಗನಾಮ: ಪ್ರಾಂಶುಪಾಲ ಬಂಧನ

Bus pass for non-students: professor arrested

15-06-2018

ಬಾಗಲಕೋಟೆ: ವಿದ್ಯಾರ್ಥಿಗಳಲ್ಲದವರಿಗೆ ಬಸ್ ಪಾಸ್ ವಿತರಣೆ ಮಾಡುತ್ತಿದ್ದ, ಐಟಿಐ ಕಾಲೇಜಿನ ಪ್ರಾಚಾರ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಬಾಗಲಕೋಟೆ ನಗರದ ವಿಶ್ವಚೇತನ ಐಟಿಐ ಕಾಲೇಜಿನಲ್ಲಿ ಘಟನೆ ಬೆಳಕಿಗೆ ಬಂದಿದೆ. ಪ್ರಾಚಾರ್ಯ ಫಾರೂಕ್ ಅಹ್ಮದ್ ಮೆಹಬೂಬ್ ಸಾಬ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಸುಮಾರು 51 ನಕಲಿ ವಿದ್ಯಾರ್ಥಿಗಳಿಗೆ, ನಕಲಿ ದಾಖಲೆ ಸೃಷ್ಟಿಸಿ ಬಸ್ ಪಾಸ್ ವಿತರಣೆ ಮಾಡಿದ್ದಾರೆ ಎನ್ನಲಾಗಿದೆ.

ಪ್ರಾಚಾರ್ಯನ ಈ ಕೃತ್ಯದಿಂದ 11 ಲಕ್ಷ 38 ಸಾವಿರ ಹಣ ಸಾರಿಗೆ ಇಲಾಖೆಗೆ ನಷ್ಟವಾಗಿದೆ. ಸಾರಿಗೆ ಇಲಾಖೆ ತನಿಖಾಧಿಕಾರಿಗಳ ತಂಡ ಕಾಲೇಜಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಕಳೆದ ಜೂನ್ 6ರಂದು ಭದ್ರತಾ ನಿರೀಕ್ಷಕಿ ಶಾರದಾ ಅಂಬಲಿ 51 ಜನರ ವಿರುದ್ಧ  ಪೊಲೀಸರಿಗೆ ದೂರು ನೀಡಿದ್ದು, ದೂರಿನನ್ವಯ ಪ್ರಮುಖ ಆರೋಪಿಯನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ. ಬಾಗಲಕೋಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

Bus Pass Professor ಐಟಿಐ ತನಿಖಾಧಿಕಾರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ