ಸಚಿವ ಡಿಕೆಶಿಗೆ ಕಾಡುಸಿದ್ದೇಶ್ವರ ಮಠದ ಶ್ರೀಗಳ ಸಲಹೆ!

kadu siddeshwara swamiji suggested to D.K.Shivakumar!

15-06-2018

ತುಮಕೂರು: 'ಸಚಿವ ಡಿ.ಕೆ.ಶಿವಕುಮಾರ್ ಮಠದ ಮಗನಾಗಿ ಬೆಳೆದಿದ್ದಾರೆ. ಮುಂದೊಂದು ದಿನ ಅವರು ಉನ್ನತ ಸ್ಥಾನಕ್ಕೆ ತಲುಪುತ್ತಾರೆ' ಎಂದು ಕಾಡುಸಿದ್ದೇಶ್ವರ ಮಠದ ಶಿವಯೋಗಿ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ‘ಸಚಿವ ಡಿ.ಕೆ.ಶಿವಕುಮಾರ್ ಅವರು ಇಂತಹದ್ದೇ ಖಾತೆ ಬೇಕು ಎಂದು ಅಪೇಕ್ಷೆ ಪಡುವುದು ಬೇಡ, ಯಾವುದೇ ಖಾತೆ ಬಂದರೂ ಕಾಯಕವೇ ಕೈಲಾಸ ಎಂದು ಕೆಲಸ ಮಾಡಲಿ. ಇರೋ‌ ಸ್ಥಾನದಲ್ಲೇ ಅವರು ಸಾಧನೆ ಮಾಡಲಿ’ ಎಂದು ಸ್ವಾಮೀಜಿ ಸಲಹೆ ನೀಡಿದ್ದಾರೆ.

ಜಿಲ್ಲೆಯ ತಿಪಟೂರು ತಾಲ್ಲೂಕಿನ ನೊಣವಿನಕೆರೆಯ ಕಾಡುಸಿದ್ದೇಶ್ವರ ಸಚಿವ ಡಿಕೆಶಿ ಅವರ ಆರಾಧ್ಯ ದೈವವೂ ಆಗಿರುವುದರಿಂದ, ಯಾವುದೇ ಶುಭ ಕಾರ್ಯಕ್ಕೂ ಮುನ್ನ ಶ್ರೀಗಳ ಆಶೀರ್ವಾದ ಪಡೆದೇ ಕೆಲಸ ಪ್ರಾರಂಭಿಸುತ್ತಾರೆ ಎಂದು ತಿಳಿದು ಬಂದಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ