ಭೀಕರ ಕೊಲೆ: ಮೂಟೆಯಲ್ಲಿತ್ತು ವ್ಯಕ್ತಿ ಶವ!

Horrific Murder at vijayapura

15-06-2018

ವಿಜಯಪುರ: ವ್ಯಕ್ತಿಯೊಬ್ಬರನ್ನು ಭೀಕರವಾಗಿ ಕೊಲೆ ಮಾಡಿ ಗೋಣಿ ಚೀಲದಲ್ಲಿ ಮೂಟೆಕಟ್ಟಿ ಬಿಸಾಡಿರುವ ಭಯಂಕರ ಘಟನೆ ವಿಜಯಪುರದಲ್ಲಿ ಬೆಳಕಿಗೆ ಬಂದಿದೆ. ಜಿಲ್ಲೆಯ ಇಂಡಿ ತಾಲ್ಲೂಕಿನ ಭಂತನಾಳ ಬಳಿಯ ಹಳ್ಳದಲ್ಲಿ ಶವ ಪತ್ತೆಯಾಗಿದೆ. ಮೂಟೆಯ ಮೇಲೆಲ್ಲಾ ರಕ್ತದ ಕಲೆಗಳಾಗಿದ್ದು, ಭೀಕರವಾಗಿ ಹತ್ಯೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಮೂಟೆಯಲ್ಲಿ ಶವ ಕಂಡು ದಾರೀಹೋಕರು ಭಯಗೊಂಡಿದ್ದಾರೆ. ಭಂತನಾಳ ಹಾಗೂ ತಾಂಬಾ ಸುತ್ತಮುತ್ತಲ ಹಳ್ಳಿಗಳ ಜನರಲ್ಲಿ ಘಟನೆ ಭಾರೀ ಆತಂಕ ಮೂಡಿಸಿದೆ. ಜನರು ರಸ್ತೆಗಳಲ್ಲಿ ಓಡಾಡಲೂ ಹೆದರುತ್ತಿದ್ದಾರೆ. ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಘಟನೆ ನಡೆದಿದೆ.


ಸಂಬಂಧಿತ ಟ್ಯಾಗ್ಗಳು

Murder Horrific ರಕ್ತದ ಕಲೆ ಭೀಕರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ