ಇನ್ನೂ 3ದಿನ ನಡೆಯಲಿದೆ ‘ಬೆಂಗಳೂರು ಆರೋಗ್ಯ ಉತ್ಸವ’

Bangalore health festival

15-06-2018

ಬೆಂಗಳೂರು: ‘ಬೆಂಗಳೂರು ಆರೋಗ್ಯ ಉತ್ಸವ’ ನಿನ್ನೆಯಿಂದ ನಗರದ ಅರಮನೆ ಮೈದಾನದಲ್ಲಿ ಆರಂಭಗೊಂಡಿದೆ. ಟಿವಿ ಹೌಸ್ ನೆಟ್‌ವರ್ಕ್‌ ಸಂಸ್ಥೆ ಆಯೋಜಿಸಿದ 4 ದಿನಗಳ ಈ ಉತ್ಸವವನ್ನು ತುಮಕೂರಿನ ಸಿದ್ಧಾರ್ಥ ವಿಶ್ವವಿದ್ಯಾಲಯದ ಕುಲಪತಿ ಡಾ.ಬಾಲಕೃಷ್ಣ ಶೆಟ್ಟಿ ಉದ್ಘಾಟಿಸಿದರು.

‘ವೈದ್ಯಕೀಯವು ಇನ್ನೂ ಸೇವಾ ಕ್ಷೇತ್ರವಾಗಿಯೇ ಉಳಿದಿದೆ. ಪೂರ್ಣ ಪ್ರಮಾಣದ ಉದ್ಯಮ ಅಗಿಲ್ಲ’ ಎಂದು ಡಾ.ಬಾಲಕೃಷ್ಣ ಶೆಟ್ಟಿ ಹೇಳಿದರು. ಮುಂದಿನ ಇಪ್ಪತ್ತು ವರ್ಷಗಳಲ್ಲಿ ವಿಜ್ಞಾನ ಆಧಾರಿತ ಆರೋಗ್ಯ ಕಾಳಜಿ ಬೆಳೆಯುತ್ತದೆ ಎಂಬುದನ್ನೂ ಹೇಳಿದರು.

ಈ ಆರೋಗ್ಯ ಮೇಳದಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಮಾಹಿತಿ, ವೈದ್ಯರ ಸಂವಾದ ಮತ್ತು ಘೋಷ್ಠಿ, ಉಚಿತ ವೈದ್ಯಕೀಯ ಪರೀಕ್ಷೆಗಳು, ಆಸ್ಪತ್ರೆ ಮಳಿಗೆಗಳು ಮತ್ತು ಪ್ರದರ್ಶನ, ಆರೋಗ್ಯ ಉತ್ಪನ್ನಗಳು ಮತ್ತು ಉಪಕರಣಗಳು, ಎಲೆಕ್ಟ್ರಾನಿಕ್ ಉಪಕರಣಗಳು, ಕಾಲೇಜುಗಳ ಮಾಹಿತಿ, ವಿವಿಧ ವೈದ್ಯಕೀಯ ಪದ್ಧತಿ ಕುರಿತ ಮಾಹಿತಿ ನೀಡುವ ಸ್ಟಾಲ್‌ಗಳು ಇವೆ.

ನಿನ್ನೆ ಉದ್ಘಾಟನಾ ನಂತರ ಮುಖ್ಯ ಸಭಾಂಗಣದಲ್ಲಿ ಆರೋಗ್ಯ ವಿಚಾರ ಸಂಬಂಧಿಸಿ ಸಂವಾದ, ಹಿರಿಯ ನಾಗರೀಕರಿಂದ ನೃತ್ಯ, ಮಹಿಳೆಯರಿಂದ ಆರೋಗ್ಯ ಕುರಿತಾದ ಸ್ಕಿಟ್, ಖ್ಯಾತ ವೈದ್ಯರಾದ ಡಾ||ಟಿ.ಹೆಚ್.ಅಂಜನಪ್ಪ ಅವರು ಆರೋಗ್ಯದ ಬಗ್ಗೆ ಜನರೊಂದಿಗೆ ಸಂವಾದ ನಡೆಸಿದರು. ಇಂದೂ ಸಹ ಹಲವಾರು ಕಾರ್ಯಕ್ರಮಗಳು ನಡೆಯಲಿವೆ.

ಸ್ತ್ರೀಯರ ಸಮಸ್ಯೆಗಳು, ಐವಿಎಫ್‌ ತಂತ್ರಜ್ಞಾನ, ಮಧುಮೇಹ ಮತ್ತು ರಕ್ತದೊತ್ತಡ ಸಂಬಂಧಿತ ಮಾಹಿತಿ ಸ್ಟಾಲ್‌ಗಳೇ ಹೆಚ್ಚು ಸಂಖ್ಯೆಯಲ್ಲಿವೆ. ಇನ್ನೂ ಮೂರು ದಿನಗಳ ಕಾಲ ಬೆಂಗಳೂರು ಆರೋಗ್ಯ ಉತ್ಸವ ನಡೆಯಲಿದ್ದು, ಎಲ್ಲರಿಗೂ ಉಚಿತ ಪ್ರವೇಶ ಕಲ್ಪಿಸಿದೆ. ಆರೋಗ್ಯ ಕುರಿತಾದ ಯಾವುದೇ ಅನುಮಾನ ಇದ್ದರೂ ವೈದ್ಯರಲ್ಲಿ ಬಗೆಹರಿಸಿಕೊಳ್ಳಬಹುದು. ಆರೋಗ್ಯದ ಕುರಿತಾದ ಮಾಹಿತಿಗೆ ಅತ್ಯುತ್ತಮ ಮೇಳವಾಗಿದೆ.


ಸಂಬಂಧಿತ ಟ್ಯಾಗ್ಗಳು

Health Festival ಸಂವಾದ ವೈದ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ