ದೆಹಲಿಯಲ್ಲಿ ಬೆಂಗಳೂರು ಮೂಲದ ಶಂಕಿತ ನಕ್ಸಲ್ ಬಂಧನ!

chhattisgarh police arrested suspected naxal at delhi!

13-06-2018 401

ಬೆಂಗಳೂರು: ಛತ್ತಿಸ್ ಗಡ ಪೋಲಿಸರು ಬೆಂಗಳೂರು ಮೂಲದ ಅಭಯ್ ದೇವದಾಸ್ ನಾಯಕ್ ಯಾನೆ ಲೋಡ್ಡಾ ಎಂಬ ನಕ್ಸಲ್ ವಾದಿಯನ್ನು ದೆಹಲಿಯಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿ ಬೆಂಗಳೂರು ಮೂಲದ ಟೆಖಿ ಎನ್ನಲಾಗಿದೆ. ಬಂಧಿತ ಆರೋಪಿಯಿಂದ ನಕ್ಸಲ್ ಚಟುವಟಿಕೆಗಳಿಗೆ ಬಳಸುತ್ತಿದ್ದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ನಕ್ಸಲ್ ಚಟುವಟಿಕೆಗಳಿಗೆ ಪ್ರಚೋದನೆ ನೀಡುತ್ತಿದ್ದ ಆರೋಪ ಅಭಯ್ ವಿರುದ್ಧ ಮಾಡಲಾಗಿದೆ. ಕೋರೆಗಾಂವ್ ಹಿಂಸಾಚಾರ ಪ್ರಕರಣದ ಆರೋಪಿ ಜೊತೆ ಸಂಪರ್ಕದಲ್ಲಿದ್ದ ಬಂಧಿತ ಆರೋಪಿ ಅಭಯ್ ಎನ್ನಲಾಗಿದೆ. ಪೊಲೀಸರ ತನಿಖೆ ವೇಳೆ ಕೋರೆಗಾಂವ್ ಹಿಂಸಾಚಾರ ಪ್ರಕರಣದ ಆರೋಪಿ ಸೋಮಸೇನ್ ಜೊತೆ ಸಂಪರ್ಕದಲ್ಲಿದ್ದದ್ದು ತನಿಖೆ ವೇಳೆ ಬಯಲಾಗಿದೆ.

ಆರೋಪಿ ಅಭಯ್ ದೇವದಾಸ್ ನನ್ನ ಬಂಧಿಸಲು ಬೆಂಗಳೂರಿನ ಮನೆ ಮೇಲೆ ದಾಳಿ ಮಾಡಿದ ಛತ್ತೀಸ್ ಗಡ ಪೊಲೀಸರು, ಈ ವೇಳೆ ನಕ್ಸಲ್ ದೇವದಾಸ್ ಸಿಗದೇ ಬರಿಗೈಲಿ ವಾಪಸ್ಸಾಗಿದ್ದರು. ಆದರೆ, ದಾಳಿ ವೇಳೆ ಆರೋಪಿ ಮನೆಯಲ್ಲಿ ನಕ್ಸಲ್ ಚಟುವಟಿಕೆಗಳಿಗೆ ಸಂಬಂಧಪಟ್ಟ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ದೇವದಾಸ್ ನನ್ನು ಇದೀಗ ದೆಹಲಿಯಲ್ಲಿ ಬಂಧಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Naxal Delhi ಕೋರೆಗಾಂವ್ ಹಿಂಸಾಚಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ