ಬೆಂಗಳೂರು ಗ್ರಾಮಾಂತರ ಬಳಿ ಚಿರತೆ ಹಾವಳಿ !

Kannada News

26-05-2017

ಬೆಂಗಳೂರು ಗ್ರಾಮಾಂತರ: ದೊಡ್ಡಬಳ್ಳಾಪುರ ತಾಲ್ಲೂಕಿನ ಮರಳೇನಹಳ್ಳಿ ಗ್ರಾಮದ ತೋಟಗಳಲ್ಲಿ ಮೂರು ದಿನಗಳಿಂದಲು ಚಿರತೆ ಕಾಣಿಸಿಕೊಂಡಿದ್ದು ರೈತರು ತೋಟಗಳ ಕಡೆಗೆಹೋಗಲು ಭಯಪಡುವಂತಾಗಿದೆ.ಈ ಬಗ್ಗೆ ಮಾಹಿತಿ ನೀಡಿರುವ ಮರಳೇನಹಳ್ಳಿ ಗ್ರಾಮದ ರೈತ ಜಯರಾಮಯ್ಯ, ಗುರುವಾರರಾತ್ರಿ ತೋಟದಲ್ಲಿನ ಕೋಳಿ ಫಾರಂ ಬಳಿ ಸುಮಾರು 12 ಗಂಟೆ ಸಮಯದಲ್ಲಿ ಚಿರತೆ ಬಂದಿದೆ. ನಾಯಿಗಳು ಜೋರಾಗಿ ಬೊಗಳಿದ್ದರಿಂದ ತೋಟದಲ್ಲಿನ ಕೆಲಸಗಾರರು ಹೊರಗೆ ಬಂದುಜೋರಾಗಿ ಕೂಗುತ್ತ ಶಬ್ದಮಾಡಿದ್ದಾರೆ. ಇದರಿಂದ ಚಿರತೆ ಹೋಡಿ ಹೋಗುತ್ತಿದ್ದನ್ನು ಬ್ಯಾಟರಿಬೆಳಕಿನಲ್ಲಿ ನೋಡಿದ್ದಾರೆ. ಬೆಳಿಗ್ಗೆ ತೋಟದಲ್ಲಿ ಚಿರತೆಯ ಹೆಜ್ಜೆ ಗುರುತುಗಳು ಮೂಡಿದ್ದವು.ಕಳೆದ  ಮೂರು ದಿನಗಳಿಂದಲು ಚಿರತೆ ಗ್ರಾಮದಲ್ಲಿನ ಬೇರೆ ಬೇರೆ ರೈತರ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗ ಗಮನಕ್ಕೆ ತರಲಾಗಿದೆ ಎಂದು ತಿಳಿಸಿರುವ ಜಯರಾಮಯ್ಯ, ತಿಪ್ಪೂರು, ಸಾಸಲು ಸೇರಿದಂತೆ ಮರಳೇನಹಳ್ಳಿ ಗ್ರಾಮದ ಮೂಲಕ ಹತ್ತಾರು ಗ್ರಾಮಗಳಿಗೆ ಸಾರ್ವಜನಿಕರು ರಾತ್ರಿ ವೇಳೆ ಬೈಕ್‌ಗಳಲ್ಲಿಸಂಚರಿಸುವುದರಿಂದ ಬೈಕ್‌ ಸವಾರರು ಎಚ್ಚರಿಕೆಯಿಂದಿರಬೇಕು  ಎಂದು ತಿಳಿಸಿದ್ದಾರೆ. ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ