ಸಾರ್ವಜನಿಕರಲ್ಲಿ ಸಾರಿಗೆ ಸಚಿವರ ಮನವಿ!

Need change in every sector said transport minister D.C thammanna

13-06-2018

ಬೆಂಗಳೂರು: ಪ್ರತಿಯೊಂದು ರಂಗದಲ್ಲೂ ಬದಲಾವಣೆ ಅನಿವಾರ್ಯ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸಾರಿಗೆ ಸಂಸ್ಥೆ ದೇಶದಲ್ಲೇ ಉತ್ತಮ ಸ್ಥಾನದಲ್ಲಿದೆ. ಹಾಗಂತ ಸುಮ್ಮನೆ ಕುಳಿತುಕೊಳ್ಳಲು ಆಗುವುದಿಲ್ಲ. ಏನೆಲ್ಲಾ ಕುಂದು ಕೊರತೆಗಳಿವೆಯೋ ಅವೆಲ್ಲವನ್ನೂ ಸರಿ ಪಡಿಸುವ ಕೆಲಸ ಮಾಡಬೇಕಿದೆ ಎಂದರು.

‘ಮೊನ್ನೆಯಷ್ಟೇ ನಮ್ಮ ಮೆಟ್ರೋದಲ್ಲಿ ಕೂಡ ಓಡಾಡಿದ್ದೇನೆ. ಮೆಟ್ರೋ ಮತ್ತು ಬಿಎಂಟಿಸಿ ನಡುವೆ ಇರುವ ವ್ಯತ್ಯಾಸಗಳ ಬಗ್ಗೆ ಪ್ರಯಾಣಿಕರ ಅಭಿಪ್ರಾಯ ಸಂಗ್ರಹಿಸಿದ್ದೇನೆ. ಬೆಂಗಳೂರಿನಲ್ಲಿ ಬಿಎಂಟಿಸಿ ಸಮಯಕ್ಕೆ ಸರಿಯಾಗಿ ಓಡಾಡುವಲ್ಲಿ ಕೈಗೊಳ್ಳುವ ಕ್ರಮಗಳ ಬಗ್ಗೆ ಚಿಂತನೆ ನಡೆದಿದೆ. ಸಾರ್ವಜನಿಕರು ಆದಷ್ಟು ಸ್ವಂತ ವಾಹನ ಬಿಟ್ಟು ಸಾರ್ವಜನಿಕ ಸಾರಿಗೆ ಬಳಸಬೇಕು ಎಂದು ಮನವಿ ಮಾಡಿದರು.


ಸಂಬಂಧಿತ ಟ್ಯಾಗ್ಗಳು

D.C tammanna Transport minister ವಿಧಾನಸೌಧ ಅನಿವಾರ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ