ಇಂದು ಆದಿಚುಂಚನಗಿರಿಗೆ ಸಿಎಂ ಭೇಟಿ

CM kumaraswamy to visit Adichunchanagiri today

13-06-2018

ಮಂಡ್ಯ: ಇಂದು ಸಿಎಂ ಕುಮಾರಸ್ವಾಮಿ ಆದಿಚುಂಚನಗಿರಿಗೆ ಭೇಟಿ ನೀಡಲಿದ್ದಾರೆ. ಚುನಾವಣೆಗೂ ಮುನ್ನ ಸಲ್ಲಿಸಿದ್ದ ಕಾಲಭೈರವೇಶ್ವರನ ಅಮಾವಾಸ್ಯೆ ಪೂಜೆ ಫಲಿಸಿದ ಹಿನ್ನೆಲೆ, ಮತ್ತೊಮ್ಮೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಮಂಡ್ಯದ ನಾಗಮಂಗಲ ತಾಲ್ಲೂಕಿನಲ್ಲಿರುವ ಆದಿಚುಂಚನಗಿರಿ ಕ್ಷೇತ್ರಕ್ಕೆ, ಈ ಹಿಂದೆ 9ಅಮಾವಾಸ್ಯೆ ಪೂಜೆ ಸಲ್ಲಿಸಿತ್ತು ಹೆಚ್ಡಿಡಿ ಕುಟುಂಬ. ಹೆಚ್.ಡಿ.ದೇವೇಗೌಡರು, ಹೆಚ್.ಡಿ.ಕುಮಾರಸ್ವಾಮಿ, ಹೆಚ್.ಡಿ.ರೇವಣ್ಣ ದಂಪತಿಯಿಂದ ತಲಾ 3 ಅಮಾವಾಸ್ಯೆಗಳಲ್ಲಿ ಪೂಜೆ ಸಲ್ಲಿಸಿದ್ದರು. ಸಿಎಂ ಆದ ಬಳಿಕ ಹರಿಕೆ ತೀರಿಸಲು ಮುಂದಾಗಿದ್ದಾರೆ ಸಿಎಂ.

ಇಂದಿನ ಪೂಜೆಯಲ್ಲಿ ಸಿಎಂ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ನಿಖಿಲ್, ಇತರೆ ಕುಟುಂಬ ಸದಸ್ಯರು ಭಾಗಿಯಾಗಲಿದ್ದಾರೆ. ಸ್ವತಃ ನಿರ್ಮಲಾನಂದನಾಥ ಶ್ರೀಗಳೇ ವಿಶೇಷ ಪೂಜೆ ನಡೆಸಿಕೊಡಲಿದ್ದಾರೆ ಎಂದು ತಿಳಿದು ಬಂದಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ