ಮಹಿಳೆ ಮೇಲೆ ಕರಡಿ ದಾಳಿ

Bear attack on woman

13-06-2018 423

ದಾವಣಗೆರೆ: ಜಮೀನಿಗೆ ತೆರಳುತ್ತಿದ್ದ ಮಹಿಳೆಯೊಬ್ಬರ ಮೇಲೆ ಕರಡಿ ದಾಳಿ ಮಾಡಿದೆ. ಜಿಲ್ಲೆಯ ಹರಪ್ಪನಹಳ್ಳಿ ತಾಲ್ಲೂಕಿನ ಹುಚ್ಚಂಗಿಪುರದಲ್ಲಿ ಘಟನೆ ನಡೆದಿದೆ. ಶಾಂತಮ್ಮ (55) ಕರಡಿ ದಾಳಿಗೊಳಗಾದ ಮಹಿಳೆ. ಬೆಳಿಗ್ಗೆ 7:30ರ ಸುಮಾರಿಗೆ ತನ್ನ ಜಮೀನಿಗೆ ಹೋಗುತ್ತಿರುವಾಗ ಕರಡಿ ಏಕಾಏಕಿ ದಾಳಿ ಮಾಡಿದೆ. ಹೆಚ್ಚಿನ ದಾಳಿಗೊಳಗಾಗದಂತೆ ಸ್ಥಳೀಯರು ಶಾಂತಮ್ಮನನ್ನು ರಕ್ಷಿಸಿದ್ದಾರೆ. ಘಟನೆಯಲ್ಲಿ ಶಾಂತಮ್ಮ ತೀವ್ರವಾಗಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಕರಡಿ ದಾಳಿಯನ್ನು ಖಂಡಿಸಿ ಅರಣ್ಯಾಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

women district hospital ಕರಡಿ ಅರಣ್ಯಾಧಿಕಾರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ