ಹೆಚ್.ಕೆ.ಪಾಟೀಲ್ ನಿವಾಸದಲ್ಲಿ ಅತೃಪ್ತ ಕೈ ಶಾಸಕರ ಚರ್ಚೆ!

congress mlas rush into H.K patil resident

12-06-2018

ಬೆಂಗಳೂರು: ಮಾಜಿ ಸಚಿವ ಹೆಚ್.ಕೆ.ಪಾಟೀಲ್ ನಿವಾಸಕ್ಕೆ ಅತೃಪ್ತ ಶಾಸಕರಿಂದಾಗಿ ಪ್ರಮುಖ ಚಟುವಟಿಕೆ ಕೇಂದ್ರವಾಗಿ ಮಾರ್ಪಟ್ಟಿತ್ತು. ನಗರದ ಶಿವಾನಂದ ಸರ್ಕಲ್ ಬಳಿಯಿರುವ ಕ್ರಸೆಂಟ್ ರಸ್ತೆ ನಿವಾಸದಲ್ಲಿ ಚಿಂಚೋಳಿ ಶಾಸಕ ಉಮೇಶ್ ಜಾಧವ್, ಬಾಗೆಪಲ್ಲಿ ಶಾಸಕ ಸುಬ್ಬಾರೆಡ್ಡಿ, ಶಹಾಪುರ ಶಾಸಕ ಶರಣಬಸಪ್ಪ ದರ್ಶನಾಪೂರ, ಮೇಲ್ಮನೆ ಸದಸ್ಯ ಬಸವರಾಜ ಇಟಗಿ ಆಗಮಿಸಿದ್ದು, ಹೆಚ್.ಕೆ. ಪಾಟೀಲ್ ಜತೆ ಚರ್ಚೆ ನಡೆಸಿದರು.

ಎಐಸಿಸಿ ಸಹ ಕಾರ್ಯದರ್ಶಿಗಳಾದ ಮಾಣಿಕ್ಯಂ ಠಾಕೂರ್ ಹಾಗೂ ಸಾಕೇ ಶೈಲಜನಾಥನ್,  ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಮಾಜಿ ಸಚಿವ ಈಶ್ವರ್ ಖಂಡ್ರೆ ಕೂಡ ಚರ್ಚಿಸಿದರು.

ಭೇಟಿ ಬಳಿಕ ಮಾತನಾಡಿ, ಹೆಚ್.ಕೆ.ಪಾಟೀಲ್ ನಮ್ಮ ಪಕ್ಷದ ಹಿರಿಯ ನಾಯಕರು. ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿಲ್ಲ. ನಾನು ಅವರನ್ನು ಸಮಾಧಾನ ಪಡಿಸಲು ಬಂದಿಲ್ಲ. ಅಸಮಾಧಾನಗೊಂಡಿರುವ ಶಾಸಕರನ್ನೇ ಹೆಚ್.ಕೆ.ಪಾಟೀಲ್ ಸಮಾಧಾನಪಡಿಸುತ್ತಿದ್ದಾರೆ. ಈಗಾಗಲೇ ಹೆಚ್.ಕೆ. ಪಾಟೀಲ್ ಜೊತೆ ಪರಮೇಶ್ವರ್ ದೂರವಾಣಿ ಮೂಲಕ ಚರ್ಚೆ ನಡೆಸಿದ್ದಾರೆ. ಹಾಗಂತ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ನನ್ನನ್ನು ಇಲ್ಲಿಗೆ ಕಳುಹಿಸಿಲ್ಲ. ಪಾಟೀಲರನ್ನು ಖುದ್ದು ಪರಮೇಶ್ವರ್ ಅವರೇ ನಾಳೆ ಭೇಟಿ ಆಗಲಿದ್ದಾರೆ ಎಂದರು.


ಸಂಬಂಧಿತ ಟ್ಯಾಗ್ಗಳು

H. K. Patil KPCC ಅತೃಪ್ತ ಎಐಸಿಸಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ