ಖಾತೆ ಬದಲಾವಣೆ ಸಿಎಂಗೆ ಬಿಟ್ಟ ವಿಚಾರ: ಹೆಚ್.ಡಿ.ರೇವಣ್ಣ

HD Revanna called for meeting all the officials,mla

12-06-2018

ಹಾಸನ: ಹಾಸನ ಜಿಲ್ಲೆಯ ವಿವಿಧೆಡೆ ಅತಿವೃಷ್ಟಿ-ಹಾನಿ ಹಿನ್ನೆಲೆ, ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಮಾತನಾಡಿ ಇದೇ ತಿಂಗಳ 14 ಮತ್ತು 15ರಂದು ಎಲ್ಲಾ ಇಲಾಖೆ ಅಧಿಕಾರಿಗಳ ಸಭೆ ಕರೆದಿದ್ದೇನೆ. ಎರಡು‌ ದಿನಗಳ ಸಭೆಯಲ್ಲಿ ಶಾಸಕರೂ, ಎಂಎಲ್ಸಿಗಳೂ ಭಾಗಿಯಾಗಲಿದ್ದಾರೆ. ಬೆಳೆಹಾನಿ ಬಗ್ಗೆ ಶೀಘ್ರ ವರದಿ ಪಡೆದು ಸರಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಸಾಲಮನ್ನಾ ವಿಚಾರದ ಕುರಿತು ಪ್ರತಿಕ್ರಿಯಿಸಿ, ಈ ವಿಚಾರವಾಗಿ ಈಗಾಗಲೇ ಸಿಎಂ ಸ್ಪಷ್ಟನೆ ನೀಡಿದ್ದಾರೆ ಎಂದರು. ಕೆಲ ಸಚಿವರ ಖಾತೆ ಬದಲಾವಣೆ ಮುಖ್ಯಮಂತ್ರಿಗೆ ಬಿಟ್ಟ ವಿಚಾರ ಎಂದು ಸ್ಪಷ್ಟಪಡಿಸಿದ್ದಾರೆ. ರಾಮನಗರ ಉಪ‌ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಆಯ್ಕೆ ವಿಚಾರ ಅಲ್ಲಿನ ಜನಾಭಿಪ್ರಾಯ ಪಡೆದು ಕುಮಾರಸ್ವಾಮಿ, ದೇವೇಗೌಡರು, ತೀರ್ಮಾನ ಮಾಡುತ್ತಾರೆ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ