ಪೊಲೀಸ್ ಸಬ್‍ ಇನ್‌ಸ್ಪೆಕ್ಟರ್‌ ಗೆ ಧಮ್ಕಿ!

Circle Inspector v/s PSI!

12-06-2018

ಬೆಂಗಳೂರು: ಅಕ್ರಮ ಕಲ್ಲು ಸಾಗಾಣಿಕೆ ತಡೆದ ಸಬ್‍ ಇನ್ಸ್ಪೆಕ್ಟರ್ (ಪಿಎಸ್‍ಐ) ಮೇಲೆ ಸರ್ಕಲ್‍ ಇನ್ಸ್ಪೆಕ್ಟರ್ ದಬ್ಬಾಳಿಕೆ ನಡೆಸಿರುವ ಘಟನೆ ದೇವನಹಳ್ಳಿ ತಾಲ್ಲೂಕಿನ ವಿಶ್ವನಾಥಪುರದಲ್ಲಿ ನಡೆದಿದೆ. ಅಕ್ರಮ ಲಾರಿಗಳನ್ನು ಬಿಡುವಂತೆ ವಿಶ್ವನಾಥಪುರ ಪಿಎಸ್‍ಐ ಶ್ರೀನಿವಾಸ್‍ಗೆ ಮೊಬೈಲ್ ಮೂಲಕ ಅದೇ ತಾಲ್ಲೂಕಿನ ವಿಜಯಪುರ ಸರ್ಕಲ್ ಸಬ್‍ ಇನ್ಸ್ಪೆಕ್ಟರ್ ಮಂಜುನಾಥ್ ಧಮ್ಕಿ ಹಾಕಿದ್ದಾರೆ.

ಜೆಡಿಎಸ್ ಮುಖಂಡರೊಬ್ಬರಿಗೆ ಸೇರಿದ ಅಕ್ರಮ ಲಾರಿಗಳಾಗಿದ್ದು, ಅದನ್ನು ತಡೆದಿದ್ದಕ್ಕೆ ಪಿಎಸ್‍ಐ-ಸರ್ಕಲ್ ಸಬ್‍ ಇನ್ಸ್ಪೆಕ್ಟರ್ ನಡುವೆ ಮಾತಿನ ಸಂಘರ್ಷ ನಡೆದಿದೆ. ಇಬ್ಬರು ಅಧಿಕಾರಿಗಳ ಏಕವಚನದ ನಿಂದನೆ ಜನರಿಗೆ ಮನರಂಜನೆ ಸಿಕ್ಕಿದ್ದು, ಇಬ್ಬರ ನಡುವಿನ ಮಾತಿನ ಸಂಘರ್ಷ ಈಗ ವೈರಲ್ ಆಗಿದೆ. ಈ ಸಂಬಂಧ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

Police inspector sand mafia ದಬ್ಬಾಳಿಕೆ ಸಂಘರ್ಷ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ