ಕೊಟ್ಟಿರುವ ಖಾತೆಗೆ ನ್ಯಾಯ ಒದಗಿಸುವೆ: ವೆಂಕಟರಾವ್ ನಾಡಗೌಡ

I will give Justice to my portfolio:Venkata Rao Nadagouda

12-06-2018

ಬಳ್ಳಾರಿ: ಪಶುಸಂಗೋಪನಾ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಬಳ್ಳಾರಿಯ ಕನಕ ದುರ್ಗಮ್ಮ ದೇವಾಯಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಂತರದಲ್ಲಿ ಮಾತನಾಡಿದ ಅವರು, ‘ಕುಮಾರಣ್ಣನ ಸಂಪುಟದಲ್ಲಿ ಸಚಿವನಾಗಿದ್ದೇನೆ. ರಾಯಚೂರಿನ ಸಿಂಧನೂರು ಕ್ಷೇತ್ರಕ್ಕೆ ಮೊದಲ ಬಾರಿಗೆ ಸಚಿವ ಸ್ಥಾನ ಒಲಿದಿದೆ. ಸಚಿವನಾದ ನಂತರ ಮೊದಲ ಬಾರಿಗೆ ಕ್ಷೇತ್ರಕ್ಕೆ ಹೋಗುತ್ತಿದ್ದು, ದಾರಿಯಲ್ಲಿ ತಾಯಿ ಕನಕ ದುರ್ಗಮ್ಮ ದೇವಿಯ ಆಶಿರ್ವಾದ ಪಡೆಯಲು ಬಂದಿದ್ದೇನೆ’ ಎಂದರು. ಈಗಾಗಲೇ ಅಧಿಕಾರಿಗಳ ಸಭೆ ಮಾಡಿದ್ದೇನೆ. ಕೊಟ್ಟ ಖಾತೆಯನ್ನು ಸಮರ್ಪಕವಾಗಿ ನಿರ್ವಹಿಸಿ, ನ್ಯಾಯ ಒದಗಿಸುವೆ ಎಂದರು.


ಸಂಬಂಧಿತ ಟ್ಯಾಗ್ಗಳು

Venkata Rao Nadagoud Animal Husbandry ಸಿಂಧನೂರು ಸಂಪುಟ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ