ಮಾಸ್ತಿಗುಡಿ ಪ್ರಕರಣ: ಜೂನ್ 27ಕ್ಕೆ ವಿಚಾರಣೆ ಮುಂದೂಡಿಕೆ

Maasthi gudi case: next hearing on 27th june

12-06-2018

ರಾಮನಗರ: ಮಾಸ್ತಿ ಗುಡಿ ಚಿತ್ರದ ಚಿತ್ರೀಕರಣ ವೇಳೆ ಇಬ್ಬರು ಖಳನಾಯಕರ ದುರಂತ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಮನಗರ 3ನೇ ಹೆಚ್ಚುವರಿ ಸತ್ರ ನ್ಯಾಯಾಲಯದಲ್ಲಿ ಇಂದು ವಿಚಾರಣೆ ನಡೆಯಿತು. ನ್ಯಾಯಾಧೀಶ ಗೋಪಾಲಕೃಷ್ಣ ರೈ ಇಬ್ಬರ ಪರ ವಾದ, ಆರೋಪ, ಪ್ರತ್ಯತಾರೋಪ ಆಲಿಸಿ, ಮುಂದಿನ ವಿಚಾರಣೆಯನ್ನು ಇದೇ ತಿಂಗಳ 27-06-2018ಕ್ಕೆ ಮುಂದೂಡಿದ್ದಾರೆ. ವಿಚಾರಣೆ ವೇಳೆ 6ಮಂದಿ ಆರೋಪಿಗಳು ನ್ಯಾಯಾಲಯದಲ್ಲಿ ಹಾಜರಾಗಿದ್ದರು. ಚಿತ್ರ ನಿರ್ಮಾಪಕ ಸುಂದರ್ ಪಿ.ಗೌಡ, ನಿರ್ದೇಶಕ ನಾಗಶೇಖರ್, ಸಾಹಸ ನಿರ್ದೇಶಕ ರವಿವರ್ಮಾ, ಯೂನಿಟ್ ಮ್ಯಾನೇಜರ್ ಭರತ್, ಸಹ ನಿರ್ದೇಶಕ ಸಿದ್ಧಾರ್ಥ ಹಾಗೂ ಮತ್ತೊಬ್ಬ ಆರೋಪಿ ಪ್ರಕಾಶ್ ಬೀರಾದಾರ್ ಕೋರ್ಟ್ನಲ್ಲಿ ಹಾಜರಿದ್ದರು.


ಸಂಬಂಧಿತ ಟ್ಯಾಗ್ಗಳು

Masti gudi Court ರವಿವರ್ಮಾ ಮ್ಯಾನೇಜರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ