ಮತ ಎಣಿಕೆ: ಅಧಿಕಾರಿಗಳು ಮತ್ತು ಏಜೆಂಟರ ಮಧ್ಯೆ ವಾಗ್ವಾದ!

vote counting: Controversy between election officers and party agents!

12-06-2018

ಕಲಬುರಗಿ: ಈಶಾನ್ಯ ಪದವೀಧರ ಕ್ಷೇತ್ರದ ಮತ ಎಣಿಕೆ ಕಾರ್ಯ ಬೆಳಗ್ಗಿನಿಂದಲೇ ಆರಂಭವಾಗಿದೆ. ಮತ ಎಣಿಕೆ ವೇಳೆ ಎರಡು ಮತ ಪೆಟ್ಟಿಗೆಗಳಲ್ಲಿನ ಮತಪತ್ರಗಳಲ್ಲಿ ವ್ಯತ್ಯಾಸದ ಹಿನ್ನೆಲೆ ಅಧಿಕಾರಿಗಳು ಮತ್ತು ಪಕ್ಷದ ಏಜೆಂಟರ ಮಧ್ಯೆ ವಾಗ್ವಾದವೂ ನಡೆಯಿತು. ಟೇಬಲ್ 7ರಲ್ಲಿ 450 ಮತಗಳೆಂದು ಹೇಳಿ ಮತ್ತೆ ವಾಪಸ್ಸು ತಂದು 510 ಮತಗಳಿವೆ ಎಂದು ಹೇಳಿದಾಗ ಏಜೆಂಟರು ಇದನ್ನು ಖಂಡಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇದರಿಂದ ಕೆಲ ಹೊತ್ತು ಮತ ಎಣಿಕೆ ಕೇಂದ್ರದಲ್ಲಿ ಗೊಂದಲ ಉಂಟಾಗಿತ್ತು.

ಇನ್ನು ಮತಗಟ್ಟೆ ಸಂಖ್ಯೆ 36ರಲ್ಲಿ 50 ಮತಪತ್ರಗಳ ವ್ಯತ್ಯಾಸ ಕಂಡುಬಂದಿದೆ ಎಂದು ಹೇಳಲಾಗುತ್ತಿದೆ. 502 ಮತಗಳ ಚಲಾವಣೆಯಾಗಿತ್ತು. ಆದರೆ, ಮತಪೆಟ್ಟಿಗೆಯಲ್ಲಿ ಸಿಕ್ಕಿರುವುದು 452 ಮತಪತ್ರಗಳು. ಮತಗಟ್ಟೆ ಸಂಖ್ಯೆ 20ರಲ್ಲೂ 10ಮತಪತ್ರಗಳ ವ್ಯತ್ಯಾಸವಾಗಿದೆ, ಒಟ್ಟು 510 ಮತಗಳ ಚಲಾಣೆಯಾಗಿತ್ತು, ಆದರೆ ಪೆಟ್ಟಿಗೆಯಲ್ಲಿ ಸಿಕ್ಕಿರುವುದು 500 ಮತಪತ್ರಗಳು, ಬರೆಯುವ ವೇಳೆ ಚುನಾವಣಾ ಸಿಬ್ಬಂದಿ ತಪ್ಪೆಸಗಿರುವ ಸಾಧ್ಯತೆ ಇದೆ ಎಂದು ಏಜೆಂಟರು ಆರೋಪಿಸಿದ್ದಾರೆ. ಆದರೆ, ಮತಪೆಟ್ಟಿಗೆಯಲ್ಲಿ ಸಿಕ್ಕ ಮತಪತ್ರಗಳನ್ನು ಮಾತ್ರ ಪರಿಗಣಿಸಲಾಗುವುದು ಎಂದು ಪ್ರಾದೇಶಿಕ ಆಯುಕ್ತ ಹಾಗೂ ಚುನಾವಣಾಧಿಕಾರಿ ಪಂಕಜ್ ಕುಮಾರ್ ಪಾಂಡೆ ಸ್ಪಷ್ಟಪಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

election Counting ವಾಗ್ವಾದ ಏಜೆಂಟರು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ