ಎತ್ತಿನ ಬಂಡಿಗಳಿಗೆ ಬೆಂಕಿ ಹಚ್ಚಿದ ಪೊಲೀಸರು!

illegal sand fire on bullock carts!

12-06-2018

ಬಾಗಲಕೋಟೆ: ಶೌಚಾಲಯ ಕಟ್ಟಲು ಎತ್ತಿನ ಬಂಡಿಯಲ್ಲಿ ಆಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ ಎತ್ತಿನ ಬಂಡಿ ಚಕ್ರಗಳಿಗೆ ಪೊಲೀಸರು ಬೆಂಕಿ ಹಚ್ಚಿದ್ದಾರೆ. ಬಾಗಲಕೋಟೆಯ ಜಂಬಗಿ ಬಿಕೆ ಗ್ರಾಮದಲ್ಲಿ ಘಟನೆ ಬೆಳಕಿಗೆ ಬಂದಿದೆ. ಶೌಚಾಲಯ ಕಟ್ಟಲು ಕೃಷ್ಣಾ ನದಿ ದಡದಲ್ಲಿ ಎತ್ತಿನ ಬಂಡಿಗಳ ಮೂಲಕ ಅಕ್ರಮವಾಗಿ ಮರಳು ಸಾಗಾಣಿಕೆಗೆ ಮಾಡುತ್ತಿದ್ದವರನ್ನು ಪೊಲೀಸರು ತಡೆದು ಎತ್ತಿನ ಬಂಡಿಗಳಿಗೆ ಬೆಂಕಿ ಹಚ್ಚಿದ್ದಾರೆ. ತಾಲ್ಲೂಕಿನ ಸಾವಳಗಿ ಠಾಣಾ ಪೊಲೀಸರು ಈ ಕೃತ್ಯ ಎಸಗಿದ್ದಾರೆ. ಸುಭಾಸ್ ಪಾಟೀಲ್, ಮಲ್ಲಪ್ಪ ನಾಗಠಾಣ ಎಂಬುವರಿಗೆ ಸೇರಿದ ಎತ್ತಿನ ಬಂಡಿಗಳು ಸುಟ್ಟು ಕರಕಲಾಗಿವೆ. ಘಟನೆಯನ್ನು ಖಂಡಿಸಿ ಪೊಲೀಸರ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

bullock cart Fire ಮರಳು ಶೌಚಾಲಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ