ಬಡ್ತಿ ಸಿಗದ ಹಿನ್ನಲೆ ನೇಣಿಗೆ ಶರಣು !

Kannada News

25-05-2017

ಬೆಂಗಳೂರು:- ಬಡ್ತಿ ಸಿಗದ ಹಿನ್ನಲೆ ಮಹಿಳೆಯೊಬ್ಬರು ನೇಣಿಗೆ ಶರಣಾಗಿರುವ ದುರ್ಘಟನೆ ನಗರದ ತಿಂಡ್ಲುವಿನ ವಿಘ್ನೇಶ್ವರ ಲೇಔಟ್‌ನಲ್ಲಿ ನಡೆದಿದೆ. ಏರ್‌ಟೆಲ್ ಕಂಪನಿಯ ಉದ್ಯೋಗಿ ದಿವ್ಯಾ ಧಮಯಂತಿ(೨೬) ಆತ್ಮಹತ್ಯೆಗೆ ಶರಣಾದವರು, ಕಂಪನಿಯಲ್ಲಿ ಫ್ಲೋರ್ ಮ್ಯಾನೇಜರ್ ಹುದ್ದೆಗೆ ಬಡ್ತಿ ಸಿಗದಿದ್ದರಿಂದ ಆಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಪತಿ ಚಿನ್ನಯ್ಯ ಅವರು ಕೆಲಸಕ್ಕೆ ಹೋಗಿ ಮೂರು ವರ್ಷದ ಮಗನನ್ನು ತವರಿಗೆ ಕಳುಹಿಸಿ ಒಂಟಿಯಾಗಿದ್ದ ದಿವ್ಯಾ ರಾತ್ರಿ ೭ರ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿದ್ಯಾರಣ್ಯಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ