ಮಹಿಳೆಯೊಬ್ಬರಿಗೆ ಅಶ್ಲೀಲ ಮೆಸೇಜ್ ಕಳುಹಿಸಿ ಕಿರುಕುಳ!

An Private company MD misbehave with women!

11-06-2018

ಬೆಂಗಳೂರು: ಮಹಿಳೆಯೊಬ್ಬರಿಗೆ ಅಶ್ಲೀಲ ಮೆಸೇಜ್‍ಗಳನ್ನು ಕಳಿಸಿ ಹೋಟೆಲ್‍ಗೆ ಬರುವಂತೆ ಕರೆದು ಖಾಸಗಿ ಕಂಪನಿಯೊಂದರ ವ್ಯವಸ್ಥಾಪಕ ನಿರ್ದೇಶಕ(ಎಂಡಿ)ನೊಬ್ಬ ಲೈಂಗಿಕ ಕಿರುಕುಳ ನೀಡುತ್ತಿದ್ದ ಹೀನ ಕೃತ್ಯ ಆಶೋಕನಗರದಲ್ಲಿ ನಡೆದಿದೆ.

ದೆಹಲಿ ಮೂಲದ ಲಾ ಕ್ಲಾಸಿ ಟ್ರಾನ್ಸ್ಲೇಷನ್ ಲಿಮಿಟೆಡ್‍ನ ಎಂಡಿ ಮನೋಹರ ರೋಷರ್ ಮನೆಯಲ್ಲೇ ಕುಳಿತು ಮಹಿಳೆ ಆನ್ ಲೈನ್ ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಮೊಬೈಲ್‍ನಲ್ಲಿ ಆಶ್ಲೀಲ ಸಂದೇಶ ಕಳುಹಿಸಿ ಹೊಟೇಲ್‍ಗೆ ಅಹ್ವಾನಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದನು.

ಇದರಿಂದ ಬೇಸತ್ತ ಮಹಿಳೆಯು ಆಶೋಕನಗರ ಪೊಲೀಸರಿಗೆ ದೂರು ನೀಡಿದ್ದರು. ‘ನನಗೆ ಆನ್‍ ಲೈನ್ ನಲ್ಲಿ ಮನೆಯಲ್ಲಿ ಮಾಡುವ ಕೆಲಸ ಕೊಡಿಸಿದ್ದ ಮನೋಹರ್ ನನ್ನ ಮೊಬೈಲ್ ಸಂಖ್ಯೆ ಪಡೆದು ಅಶ್ಲೀಲ ಮೆಸೇಜ್ ಗಳನ್ನು ಕಳಿಸುತ್ತಿದ್ದ. ಹೋಟೆಲ್‍ಗೆ ಬರುವಂತೆ ವಾಟ್ಸಪ್‍ನಲ್ಲಿ ಸಂದೇಶ ಕಳುಹಿಸಿ ಕಿರುಕುಳ ನೀಡುತ್ತಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದರು. ದೂರು ದಾಖಲಾಗುತ್ತಿದ್ದಂತೆ ಮನೋಹರ್ ಪರಾರಿಯಾಗಿದ್ದಾನೆ. ನಾಪತ್ತೆಯಾಗಿರುವ ಮನೋಹರ್‍ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Message watsapp ಹೋಟೆಲ್‍ ಪರಾರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ