ಶಿಕ್ಷಣ ರಸ್ತೆ ಬದಿಯ ಜಾಹೀರಾತಾಗಿದೆ:ಪ್ರಕಾಶ್ ರೈ

save the government schools: Prakash Rai

11-06-2018

ಮಂಡ್ಯ: ಕೆ.ಆರ್.ಪೇಟೆಯ ಶತಮಾನದ ಶಾಲೆಯ ಪೋಷಕರ ಸಭೆಗೆ ನಟ ಪ್ರಕಾಶ್ ರೈ ಆಗಮಿಸಿದ್ದರು. ಈ ವೇಳೆ ಮಾತನಾಡಿ, ಶಿಕ್ಷಣ ವ್ಯಾಪರೀಕರಣಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ದೇಶದಲ್ಲಿ‌ ನಡೆಯುತ್ತಿದೆ. ಪೋಷಕರು ಮಕ್ಕಳಿಗೆ ಶ್ರೀಮಂತಿಕೆಯನ್ನು ಉತ್ತಮ ಶಿಕ್ಷಣ ಕೊಡಿಸುವ ಮೂಲಕ ನೀಡಬೇಕು. ಶಿಕ್ಷಣ ರಸ್ತೆ ಬದಿಯಲ್ಲಿ ಜಾಹೀರಾತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಗುಣಮಟ್ಟದ ಶಿಕ್ಷಣ ನೀಡುವುದು ಸರ್ಕಾರದ ಕೆಲಸ. ಸರ್ಕಾರ ನಡೆಯುವುದು ಜನರ ತೆರಿಗೆ ಹಣದಿಂದ‌, ಆದ್ದರಿಂದ ಅವರು ನಮ್ಮ ಮಕ್ಕಳಿಗೆ ಸರ್ಕಾರಿ ಶಾಲೆಯಲ್ಲೇ ಉತ್ತಮ ಶಿಕ್ಷಣ ಕೊಡಬೇಕು. ಇಲ್ಲದಿದ್ದರೆ ಸರ್ಕಾರದ ಕತ್ತಿನ ಪಟ್ಟಿ ಹಿಡಿದು ಕೇಳುವ ಹಕ್ಕು ನಮಗಿದೆ ಎಂದರು.

ನಮ್ಮ ಜನ ಹೆಣ್ಣು ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುತ್ತಾರೆ. ಆದರೆ, ಗಂಡು ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸುತ್ತಾರೆ, ಹೆಣ್ಣು ಮಕ್ಕಳು ಮದುವೆಯಾಗಿ ಬೇರೆ ಮನೆಗೆ ಹೋಗುತ್ತಾರೆ ಎಂಬ ಕೀಳರಿಮೆ ಇನ್ನೂ ಇದೆ. ಇನ್ನೂ ಬೇಸರದ ಸಂಗತಿ ಎಂದರೆ, ಶಾಲೆಯಲ್ಲಿ ಶೌಚಾಲಯವಿಲ್ಲದ್ದರಿಂದ, ತಾಯಿ ಹೆಣ್ಣು ಮಕ್ಕಳಿಗೆ ನೀರು ಕಡಿಮೆ ಕುಡಿಸಿ ಕಳುಹಿಸುತ್ತಾರೆ. ಏಕೆಂದರೆ ಶೌಚಾಲಯಕ್ಕೆ ಹೋಗದಿರಲಿ ಎಂದು. ಶಾಲೆಯಲ್ಲಿ ಮೂಲ ಸೌಕರ್ಯಗಳೇ ಇಲ್ಲದಿರುವಾಗ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಲು ಹೇಗೆ ಸಾಧ್ಯ. ಸರ್ಕಾರಿ ಶಾಲೆಯನ್ನು ಉಳಿಸುವ ಕೆಲಸಕ್ಕೆ ಮುಂದಾಗೋಣ ಎಂದರು.


ಸಂಬಂಧಿತ ಟ್ಯಾಗ್ಗಳು

Prakash Rai Government school ಶೌಚಾಲಯ ತೆರಿಗೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ