ಬಿಬಿಎಂಪಿ: ಲಾರಿ ಮಾಲೀಕರು-ಗುತ್ತಿಗೆದಾರರ ಅನಿರ್ದಿಷ್ಟಾವಧಿ ಧರಣಿ

BBMP: The Lorry Owners-Contractors strike

11-06-2018

ಬೆಂಗಳೂರು: ಬಾಕಿ ಇರುವ 220 ಕೋಟಿ ರೂಪಾಯಿ ಗುತ್ತಿಗೆ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಬಿಬಿಎಂಪಿ ಸ್ವಚ್ಛತೆ ಮತ್ತು ಲಾರಿ ಮಾಲೀಕರು ಹಾಗೂ ಗುತ್ತಿಗೆದಾರರು ಬಿಬಿಎಂಪಿ ಕಚೇರಿ ಮುಂಭಾಗ ಅನಿರ್ದಿಷ್ಟಾವಧಿ ಧರಣಿ ನಡೆಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಬಾಲ ಸುಬ್ರಹ್ಮಣ್ಯ ಅವರ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ಪಾಲ್ಗೊಂಡಿದ್ದ ಗುತ್ತಿಗೆದಾರರು 2018 ಜನವರಿಯಿಂದ ಮೇ ತಿಂಗಳವರೆಗೆ ಅಂದರೆ ಒಟ್ಟು 5 ತಿಂಗಳ ಬಿಲ್ಲನ್ನು ಇಂದಿನವರೆಗೆ ಪಾವತಿಸಿರುವುದಿರುವುದರಿಂದ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದು ಕೂಡಲೇ ಬಾಕಿ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.

ಕಳೆದ 2017 ಆಗಸ್ಟ್ ನಿಂದ 2017 ಡಿಸೆಂಬರ್ ವರೆಗೆ ಬಿಲ್ಲಿನ ಮೊತ್ತದ ಶೇ.10 ರಷ್ಟು ಮೊತ್ತವನ್ನು ಬಾಕಿ ಉಳಿಸಿಕೊಂಡಿದ್ದು, ಇಲ್ಲಸಲ್ಲದ ನೆಪವೊಡ್ಡಿ ಕಡತವನ್ನು ಪದೇ ಪದೇ ಹಿಂತಿರುಗಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಬಿಬಿಎಂಪಿ ಕಚೇರಿಯ ಮುಖ್ಯ ದ್ವಾರದಲ್ಲಿ ಪ್ರತಿಭಟನೆ ನಡೆಯುತ್ತಿರುವುದರಿಂದ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಬೇರೆ ಪ್ರವೇಶ ದ್ವಾರಗಳ ಮೂಲಕ ಕಚೇರಿ ಒಳಗೆ ಹೋಗಬೇಕಾಯಿತು.

ಬೆಂಗಳೂರಿನಲ್ಲಿ ಕಸ ವಿಲೇವಾರಿಗೆ ಸಂಬಂಧಿಸಿದಂತೆ 80 ಗುತ್ತಿಗೆದಾರರಿದ್ದು, ಕಳೆದ 5 ತಿಂಗಳ ಬಿಲ್ಲು ಮತ್ತು ಹಿಂದಿನ ಬಾಕಿ ಸೇರಿದಂತೆ ಸುಮಾರು 220 ಕೋಟಿ ರೂಪಾಯಿಗಳನ್ನು ಬಿಬಿಎಂಪಿ ಗುತ್ತಿಗೆದಾರರಿಗೆ ಪಾವತಿಸಬೇಕಾಗಿದೆ. ಆದರೆ ಪಾಲಿಕೆಯ ಹಣಕಾಸು ಇಲಾಖೆ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ದುರ್ವತನೆ ತೋರುತ್ತಿದ್ದಾರೆ ಎಂದು ಬಾಲ ಸುಬ್ರಹ್ಮಣ್ಯ ಆರೋಪಿಸಿದರು. ವಾಹನಗಳ ಬಾಡಿಗೆಯ ಪರಿಷ್ಕೃತ ದರವನ್ನು ಅಂದಿನ ನಗರಾಭಿವೃದ್ಧಿ ಸಚಿವರ ಅಧ್ಯಕ್ಷತೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ ಪರಿಷ್ಕೃತ ದರ ಇದೂವರೆಗೆ ಜಾರಿಗೆ ತರದೆ ಘನ ತಾಜ್ಯ ವಿಲೇವಾರಿ ವಿಭಾಗದ ಜಂಟಿ ಆಯುಕ್ತರ ಕೆಟ್ಟ ವಿವೇಚನೆಯಿಂದ ಜಾರಿಗೆ ಬಂದಿಲ್ಲ ಎಂದು ದೂರಿದರು.

ಕಸ ವಿಲೇವಾರಿ ಗುತ್ತಿಗೆದಾರರಿಗೆ ತೊಂದರೆ ಕೊಟ್ಟವರೆಲ್ಲಾ ತೊಲಗಿ ಹೋಗಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದ ಅವರು ಹಿಂದಿನ ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ಹರಿಹಾಯ್ದ ಸುಬ್ರಹ್ಮಣ್ಯ ಸಚಿವ ಕೆ.ಜೆ.ಜಾರ್ಜ್ ಹಾಗೂ ಅವರ ಪುತ್ರ ಇಬ್ಬರೇ ಬದುಕಿದ್ದರೇ ಸಾಕು, ಬೇರೆಯವರು ಹೇಗಾದರೂ ಹಾಳಾಗಿ ಹೋಗಲಿ, ಎಂಬ ನಿಲ್ಲುವಿನವರು ಎಂದು ಕಿಡಿಕಾರಿದರು.

ಗುತ್ತಿಗೆದಾರರು ಪ್ರತಿಭಟನೆ ನಡೆಸುವುದು, ತಿಳಿದಿರುವುದರಿಂದ ಹಣಕಾಸು ವಿಭಾಗದ ಅಧಿಕಾರಿ ಮನೋಜ್ ರಾಜನ್ 15 ದಿನಗಳ ಕಾಲ ರಜೆ ಹಾಕಿ ಹೋಗಿದ್ದಾರೆ. ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕುವುದು ಇದರ ಗೂಡಾರ್ಥ ಯಾವುದೇ ರೀತಿಯ ಒತ್ತಡಗಳಿಗೆ ಗುತ್ತಿಗೆದಾರರು ಮಣಿಯುವುದಿಲ್ಲ. ನಮಗೆ ಬರಬೇಕಾದ ಬಾಕಿ ಹಣವನ್ನು ಕೂಡಲೇ ಪಾವತಿಸಬೇಕೆಂದು ಆಗ್ರಹಿಸಿದರು. ಈ ಸಂಬಂಧ ನೂತನವಾಗಿ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಹೊಂದಿರುವ ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರನ್ನು ಭೇಟಿ ಮಾಡಿ ಮಾಹಿತಿ ನೀಡಿ ಬಾಕಿ ಪಾವತಿಗೆ ಒತ್ತಾಯಿಸಲಾಗುವುದೆಂದು ಹೇಳಿದರು.


ಸಂಬಂಧಿತ ಟ್ಯಾಗ್ಗಳು

BBMP contractors ಮುಖ್ಯಮಂತ್ರಿ ಗುತ್ತಿಗೆದಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ