ಆಸರೆಗಾಗಿ ಬಂದವನು ಹಣ, ಮೊಬೈಲ್ ಕದ್ದು ಪರಾರಿ

mobile and cash theft at his friend

11-06-2018

ಬೆಂಗಳೂರು: ಆಸರೆ ಕೊಟ್ಟ ಸ್ನೇಹಿತರ ಮೊಬೈಲ್, ಹಣ ಕದ್ದು ಪರಾರಿಯಾಗಿದ್ದ ಖದೀಮನನ್ನು ಸ್ನೇಹಿತರೇ ಹಿಡಿದು ಕೆ.ಆರ್.ಪುರಂ ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ನೇಹಿತನ ಮನೆಗೆ ಕನ್ನ ಹಾಕಿದ ಸಾಗರ ಮೂಲದ ಸಿದ್ದಿಕ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಕೆ.ಆರ್ ಪುರಂನಲ್ಲಿರುವ ಸ್ನೇಹಿತರ ರೂಮ್‍ನಲ್ಲಿ ಸಿದ್ದಿಕ್ ಆಸರೆ ಪಡೆದಿದ್ದನು. ರೂಮಿನಲ್ಲಿ ಯಾರು ಇಲ್ಲದ ವೇಳೆಯಲ್ಲಿ ಸ್ನೇಹಿತರ ಮೂರು ಮೊಬೈಲ್, 10 ಸಾವಿರ ನಗದು ಕಳ್ಳತನ ಮಾಡಿ ಪರಾರಿಯಾಗಿದ್ದಾನೆ. ಮೊಬೈಲ್ ಕದ್ದು ಹೋಗುತ್ತಿದ್ದ ಸಿದ್ದಿಕ್ ನನ್ನು ಸ್ನೇಹಿತರು ನಗರದ ಹೊರವಲಯದ ನೆಲಮಂಗಲದ ಬಳಿ ಹಿಡಿದಿದ್ದಾರೆ. ಕೊನೆಗೆ ಸಿದ್ದಿಕ್‍ನನ್ನು ಕೆ.ಆರ್.ಪುರಂ ಠಾಣೆಯ ಪೊಲೀಸರ ವಶಕ್ಕೆ ನೀಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Mobile Theft ಆಸರೆ ಸ್ನೇಹಿತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ