ಅನೈತಿಕ ಸಂಬಂಧ: ದೊಣ್ಣೆಗಳಿಂದ ಹೊಡೆದು ವ್ಯಕ್ತಿ ಕೊಲೆ

Illegal Relationship: A man killed

11-06-2018

ಬೆಂಗಳೂರು: ಕನಕಪುರದ ಚಂಬಳಿಕೆದೊಡ್ಡಿಯಲ್ಲಿ ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧದ ಹೊಂದಿದ್ದ ಯುವಕನನ್ನು ದೊಣ್ಣೆಗಳಿಂದ ಹೊಡೆದು ಕೊಲೆ ಮಾಡಿರುವ ದುರ್ಘಟನೆ ನಡೆದಿದೆ. ಕೊಲೆಯಾದವರನ್ನು ಚಂಬಳಿಕೆದೊಡ್ಡಿಯ ನಂಜಯ್ಯ (28)ಎಂದು ಗುರುತಿಸಲಾಗಿದೆ.

ಕೊಲೆಯಾಗಿರುವ ನಂಜಯ್ಯ ತನ್ನದೇ ಗ್ರಾಮದ ವಿವಾಹಿತ ಮಹಿಳೆಯೊಬ್ಬಳ ಜೊತೆ ಅನೈತಿಕ ಸಂಬಂಧ ಹೊಂದಿದ್ದರು. ಕಳೆದ ತಿಂಗಳು ಆಕೆಯನ್ನು ಬೇರೆಡೆ ಕರೆದೊಯ್ದು ಮೋಜು ಮಾಡಿ ಆರು ದಿನಗಳ ಬಳಿಕ ಗ್ರಾಮಕ್ಕೆ ವಾಪಾಸ್ಸಾಗಿದ್ದರು. ಮಹಿಳೆಯು ಮತ್ತೆ ಪತಿಯ ಮನೆ ಸೇರಿದ್ದು ಇದು ಗ್ರಾಮದಲ್ಲೇಲ್ಲಾ ಗುಲ್ಲಾಗಿ ನಂಜಯ್ಯ ಹಾಗೂ ಪತ್ನಿಯ ಅನೈತಿಕ ಸಂಬಂಧದಿಂದ ಪತಿ ಸ್ವಾಮಿ ಬೇಸತ್ತಿದ್ದರು. ಹಲವು ಬಾರಿ ಹೇಳಿದರೂ ನಂಜಯ್ಯನ ವರ್ತನೆ ಸರಿಯಾಗಿರಲಿಲ್ಲ.

ಇದರಿಂದ ರೊಚ್ಚಿಗೆದ್ದ ಸ್ವಾಮಿ ಕಳೆದ ಜೂನ್ 9ರಂದು ಮನೆಯ ಬಳಿಯಿದ್ದ ನಂಜಯ್ಯನಿಗೆ ಸ್ನೇಹಿತರ ಜೊತೆ ದೊಣ್ಣೆಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ. ಗಂಭೀರವಾಗಿ ಗಾಯಗೊಂಡಿದ್ದ ನಂಜಯ್ಯನನ್ನು ಸ್ಥಳೀಯ ಆಸ್ಪತ್ರಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಸಾವನ್ನಪ್ಪಿದ್ದಾರೆ. ಕೋಡಿಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Relationship Murder ವಿವಾಹಿತ ಅನೈತಿಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ