‘ಅತೃಪ್ತಿ, ಅಸಮಾಧಾನ ಎಲ್ಲಾ ಶಮನವಾಗಿದೆ’-ಸಿದ್ದರಾಮಯ್ಯ

siddaramaiah Reaction on unhappy congress MLAs at badami

11-06-2018

ಬಾಗಲಕೋಟೆ: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದ ಕಾಂಗ್ರೆಸ್ ನ ಅತೃಪ್ತ ಶಾಸಕರ ವಿಚಾರದ ಕುರಿತು ಮಾಜಿ ಸಿಎಂ ಹಾಗು ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಬಾದಾಮಿಯಲ್ಲಿ ಮಾತನಾಡಿದ್ದಾರೆ. ‘ಅತೃಪ್ತಿ, ಅಸಮಾಧಾನ ಎಲ್ಲಾ ಶಮನವಾಗಿದೆ. ಮಳೆ ನಿಂತ ಮೇಲೆ ಮರದ ಮೇಲಿಂದ ಹನಿಗಳು ಬೀಳುತ್ತಲೇ ಇರುತ್ತವೆ' ಎಂದು ಅತೃಪ್ತತೆ ಬಗ್ಗೆ ತಮ್ಮ ನಡೆ ಸಮರ್ಥಿಸಿಕೊಂಡರು.

ಕನಕಗುರು ಪೀಠದ ಈಶ್ವರಾನಂದ ಪುರಿ ಸ್ವಾಮೀಜಿಯವರು 'ಸಿದ್ದರಾಮಯ್ಯ ‌ಮನೆಗೆ ಮಾರಿ ನಾಡಿಗೆ ಉಪಕಾರಿ' ಎಂಬ ಹೇಳಿಕೆಗೆ, ‘ಅದು ತುಂಬಾ ಹಳೆಯ ಗಾದೆ. ನಮ್ಮ ತಂದೆಯವರು ನನಗೆ ಅದನ್ನೇ ಹೇಳುತ್ತಿದ್ದರು' ಎಂದರು. ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದ್ದ ಪ್ರಸ್ತಾವನೆ ಮರಳಿಸಿದ್ದಾರೆ ಎಂದು ಹೇಳಲಾಗುತ್ತಿರುವ ವಿಷಯದ ಕುರಿತು, ಈ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳುತ್ತದೆ. ಆ ಬಗ್ಗೆ ನಾನೇನು ಹೇಳೋದಿಲ್ಲ ಎಂದರು.

 

 

 


ಸಂಬಂಧಿತ ಟ್ಯಾಗ್ಗಳು

Siddaramaiah Lingayat ಲಿಂಗಾಯತ ಸ್ವಾಮೀಜಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ