ಮಾಜಿ ಸಚಿವ ಬಿ.ಎಸ್.ಪಾಟೀಲ ಸಾಸನೂರ ನಿಧನ

Former Minister B.S.Patil passes away

11-06-2018

ವಿಜಯಪುರ: ಮಾಜಿ ಸಚಿವ ಬಿ.ಎಸ್.ಪಾಟೀಲ ಸಾಸನೂರ(87) ವಿಧಿವಶರಾಗಿದ್ದಾರೆ. ತೀವ್ರ ಅನಾರೋಗ್ಯ ಹಿನ್ನೆಲೆ ವಿಜಯಪುರದ ಬಿಎಲ್ ಡಿಇ ಆಸ್ಪತ್ರೆಗೆ ದಾಖಲಾಗಿದ್ದ ಪಾಟೀಲ ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ. ನಾಳೆ ಸಾಸನೂರಿನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಅಂತ್ಯಕ್ರಿಯೆ ಹಿರೂರಿನಲ್ಲಿ ನಡೆಯಲಿದೆ. ಬಿ.ಎಸ್.ಪಾಟೀಲ್ ಅವರು ಹೂವಿನ ಹಿಪ್ಪರಗಿ ಕ್ಷೇತ್ರದಿಂದ ಒಟ್ಟು ಐದು ಬಾರಿ ಕಾಂಗ್ರೆಸ್ ಶಾಸಕರಾಗಿದ್ದರು. ಬಿ.ಎಸ್.ಪಾಟೀಲ್ ಅವರು ಎರಡು ಬಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಹಿರಿಯ ರಾಜಕಾರಣಿ ಬಿ.ಎಸ್.ಪಾಟೀಲ ಸಾಸನೂರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

B.S.Patil Minister ಅನಾರೋಗ್ಯ ರಾಜಕಾರಣಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Hai
  • Ramesh
  • Propoter