ಅಕ್ರಮವಾಗಿ ನೆಲೆಸಿದ್ದ ನೈಜೀರಿನ್ ವ್ಯಕ್ತಿಗಳ ಬಂಧನ !

Kannada News

25-05-2017

ಬೆಂಗಳೂರು:- ತಮಿಳುನಾಡಿ ಉದ್ಯಮಿಯೊಬ್ಬರಿಗೆ ೪೮ ಲಕ್ಷ ರೂ. ವಂಚಿಸಿ ನಗರಕ್ಕೆ ಬಂದು ತಲೆಮರೆಸಿಕೊಂಡಿದ್ದ ನೈಜೀರಿಯನ್ ಹಾಗೂ ವೀಸಾ ಪಾಸ್‌ಪೋರ್ಟ್ ಅವಧಿ ಮುಗಿದಿದ್ದರೂ ಅಕ್ರಮವಾಗಿ ನೆಲೆಸಿದ್ದ ಇಬ್ಬರು ನೈಜೀರಿನ್ ವ್ಯಕ್ತಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೆ.ಆರ್.ಪುರಂ ನ ಸೀಗೆಹಳ್ಳಿಯ ಬಳಿ ನಡೆಸಿದ್ದ ನೈಜೀರಿಯಾದ ವೆಬುಜೆ (೨೮) ಹಾಗೂ ಆಂಟೋನಿ ಅಂಡರ್ಸನ್ (೪೨) ರನ್ನು ಬಂಧಿಸಿ, ೨ ಲ್ಯಾಪ್ ಟಾಪ್, ೧೩ ಮೊಬೈಲ್‌ಗಳನ್ನು  ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ನೆಲೆಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಆರೋಪಿ ಆಂಟೋನಿ ಅಂಡರ್ಸನ್ ತನ್ನ ಸಹಚರರಾದ ಪ್ರಿನ್ಸ್ ಹಾಗೂ ಜೇಮ್ಸ್ ಆಡಂರೊಂದಿಗೆ ತಮಿಳುನಾಡಿನ ಕಾಂಜಿವರಂನ ಉದ್ಯಮಿಯೊಬ್ಬರಿಗೆ ೪೮ ಲಕ್ಷ ರೂ. ವಂಚನೆ ಮಾಡಿ ನಗರಕ್ಕೆ ಬಂದು ತಲೆಮರೆಸಿಕೊಂಡಿರುವುದು ಪತ್ತೆಯಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್.ರವಿ ತಿಳಿಸಿದ್ದಾರೆ. ಆರೋಪಿಗಳು ಅನಧಿಕೃತ ವಾಸ್ತವವನ್ನು ಮರೆಮಾಚಲು ನಕಲಿ ಪಾಸ್ ಪೋರ್ಟ್ ಮತ್ತು ವೀಸಾಗಳನ್ನು ಸೃಷ್ಟಿಸಿಕೊಂಡು ಇಟ್ಟುಕೊಂಡಿದ್ದರು. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ