ಕನ್ನಡ ಕಲಿಯದೇ ಇದ್ದದ್ದು ನನ್ನ ದುರದೃಷ್ಟ:ಜಮೀರ್ ಅಹಮದ್

Nothing wrong in taking advice of Deve Gowda: Zameer Ahmed

09-06-2018

ತುಮಕೂರು: ‘ಯಾವ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ, ಅನುಭವ ಇಲ್ಲ, ಆದರೂ ಗಿನ್ನಿಸ್‌ ದಾಖಲೆ ಮಾಡುತ್ತೇನೆ. ಐದು ವರ್ಷದಲ್ಲಿ ನನ್ನ ಖಾತೆಯಲ್ಲಿ ಇತಿಹಾಸ ಸೃಷ್ಟಿಸಿ ಗಿನ್ನಿಸ್ ದಾಖಲೆ ಮಾಡುತ್ತೇನೆ’ ಎಂದು ಸಚಿವ ಜಮೀರ್ ಅಹಮದ್ ಹೇಳಿದ್ದಾರೆ.

‘ನಮ್ಮದು ಸಮ್ಮಿಶ್ರ ಸರ್ಕಾರ ಆದ್ದರಿಂದ ದೇವೇಗೌಡರ ಸಲಹೆ ಕೇಳುವುದರಲ್ಲಿ ತಪ್ಪಿಲ್ಲ, ರಾಜ್ಯದ ಸಮಸ್ಯೆ ಇದ್ದಾಗ ದೇವೇಗೌಡರ ಮಾತೂ ಕೇಳಬೇಕು, ಅವರು ಅನುಭವಿಗಳು, ಪ್ರಧಾನಿಯೂ ಆಗಿದ್ದಂತಹವರು’ ಎಂದರು. ಖಾತೆ ಹಂಚಿಕೆಯಲ್ಲಿ ದೇವೇಗೌಡರಾಗಲಿ, ಕುಮಾರಸ್ವಾಮಿ ಅವರ ಪ್ರಭಾವ ಇಲ್ಲ ಎಂದರು. ಇಂಗ್ಲಿಷಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ‌ ವಿಚಾರವಾಗಿ ಮಾತನಾಡಿ, ‘ಈ ಕುರಿತು ಕನ್ನಡದ ಜನತೆಯಲ್ಲಿ ಕ್ಷಮೆ ಕೇಳುತ್ತೇನೆ, ಕನ್ನಡ ಕಲಿಯದೇ ಇದ್ದದ್ದು ನನ್ನ ದುರದೃಷ್ಟ. ನಾನು ಓದಿದ್ದು ಇಂಗ್ಲಿಷ್ ಶಾಲೆಯಲ್ಲಿ. ತಂದೆ-ತಾಯಿ ನನಗೆ ಕನ್ನಡ ಕಲಿಸಿಲ್ಲ. ಪ್ರಮಾಣವಚಚದ ವೇಳೆ ತಪ್ಪಾಗಬಾದರು ಎಂಬ ಕಾರಣಕ್ಕೆ ಇಂಗ್ಲೀಷ್ ನಲ್ಲೇ ಪ್ರಮಾಣ ವಚನ ಸ್ವೀಕರಿಸಿದ್ದೇನೆ. ರಾಜ್ಯದ ಜನತೆಗಿಂತ‌ ದುಪ್ಪಟ್ಟು ನೋವು ನನಗಾಗಿದೆ. ನಾನು ಬೇಕಂತಲೇ ಇಂಗ್ಲಿಷ್ ನಲ್ಲಿ ಪ್ರಮಾಣ ವಚನ ಮಾಡಿದ್ದರೆ ನನಗೆ ಗಲ್ಲು ಶಿಕ್ಷೆ ಕೊಡಲಿ, ಬೇಕಂತಲೇ ಮಾಡಿದ್ದರೆ ನನ್ನ ದೇಶ‌ದ್ರೋಹಿ ಅನ್ನಲಿ’ ಎಂದು ಹೇಳಿಕೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Zameer Ahmed JDS ಗಿನ್ನಿಸ್‌ ಅನುಭವಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ