ಬೀದಿ ಕಾಮಣ್ಣನಿಗೆ ಬಿತ್ತು ಸಖತ್ ಗೂಸಾ

sexual harassment on Road at hubballi

09-06-2018

ಹುಬ್ಬಳ್ಳಿ: ಹುಡುಗಿಯರನ್ನು ಚುಡಾಯಿಸುತ್ತಿದ್ದ ಬೀದಿ ಕಾಮಣ್ಣನಿಗೆ ಸಖತ್ ಗೂಸಾ ಬಿದ್ದಿದೆ. ಹುಬ್ಬಳ್ಳಿಯ ನೇಕಾರನಗರದ ಬ್ರಿಡ್ಜ್ ಬಳಿ ನಿಂತು, ಬಂದು ಹೋಗುತ್ತಿದ್ದ ಯುವತಿಯರನ್ನ ಚುಡಾಯಿಸುತ್ತಿದ್ದ ಬೀದಿ ಕಾಮಣ್ಣನನ್ನು ಸಾರ್ವಜನಿಕರೇ ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದಾರೆ. ಆಟೋ ಚಾಲಕನಾಗಿರುವ ರಮೇಶ್ ಶಿಗ್ಲಿ ಒದೆ ತಿಂದಿರುವ ಕಾಮುಕ.

ರಮೇಶ ಶೆಗ್ಲಿ ನೇಕಾರನಗರದ ಬ್ರಿಡ್ಜ್  ಬಳಿ ನಿಂತು ಶಿಳ್ಳೆ, ಚಪ್ಪಾಳೆ ಹೊಡೆದು ಯುವತಿಯರನ್ನ ರೇಗಿಸುತ್ತಿದ್ದ. ಈತನ ವರ್ತನೆಯಿಂದ ಬೇಸತ್ತಿದ್ದ ಸ್ಥಳೀಯರು, ನಿನ್ನೆ ಸಂಜೆಯೂ ಸಹ ಈತ ತನ್ನ ಚಾಳಿ ಮುಂದುವರೆಸಿದ್ದ. ಯುವತಿಯನ್ನ ಚುಡಾಯಿಸುತ್ತಿದ್ದಾಗ ರೊಚ್ಚಿಗೆದ್ದ ಜನ ಮನಸೋಇಚ್ಛೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

sexual harassment Auto driver ನೇಕಾರ ಬ್ರಿಡ್ಜ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ