ಖಾತೆ ಹಂಚಿಕೆ: ಹೆಚ್.ಡಿ.ರೇವಣ್ಣ ಅಸಮಾಧಾನ!

Dissatisfaction over portfolio distribution in JDS: HD revanna!

09-06-2018

ಬೆಂಗಳೂರು: ಒಂದೆಡೆ ಕಾಂಗ್ರೆಸ್ ನಲ್ಲಿ ಸಚಿವ ಸ್ಥಾನ ಸಿಗದ ಕಾಂಗ್ರೆಸ್ ನ ಪ್ರಭಾವಿ ನಾಯಕರು ಅಸಮಾಧಾನಗೊಂಡಿದ್ದರೆ, ಮತ್ತೊಂದೆಡೆ ಪ್ರಭಾವಿ ಖಾತೆ ಸಿಗದಿದ್ದಕ್ಕೆ ಜೆಡಿಎಸ್ ನಲ್ಲೂ ಅಸಮಾಧಾನದ ಮಾತುಗಳು ಕೇಳಿಬಂದಿವೆ. ಜೆಡಿಎಸ್ ಮುಖಂಡ ಹಾಗು ಸಚಿವ ಹೆಚ್.ಡಿ.ರೇವಣ್ಣರಿಂದಲೂ ಅಸಮಾಧಾನ ವ್ಯಕ್ತವಾಗಿದೆ ಎಂದು ಹೇಳಲಾಗುತ್ತಿದೆ. ಒಂದೇ ಖಾತೆ ಕೊಟ್ಟಿದ್ದಕ್ಕೆ ಸಿಡಿಮಿಡಿಗೊಂಡಿರುವ ಹೆಚ್.ಡಿ.ರೇವಣ್ಣ, ಲೋಕೋಪಯೋಗಿ ಖಾತೆ ಜೊತೆಗೆ ಇಂಧನ ಖಾತೆಯನ್ನೂ ಬಯಸಿದ್ದರು. ಆದರೆ, ಇಂಧನ ಖಾತೆ ತಪ್ಪಿಸಿ ಕೇವಲ ಲೋಕೋಪಯೋಗಿ ಖಾತೆ ಕೊಟ್ಟಿರುವ ಜೆಡಿಎಸ್ ವರಿಷ್ಠರ ವಿರುದ್ಧ ‘ಪಕ್ಷದ ಬಾಕಿ ಸಚಿವರೂ ತಾವೂ ಒಂದೇನಾ’ ಎಂದು ಸಿಟ್ಟಾಗಿದ್ದಾರೆ. ಡಿ.ಕೆ.ಶಿವಕುಮಾರ್ ಗೆ ಇಂಧನ ಖಾತೆ ಸಿಕ್ಕಿಲ್ಲ ಆದರೂ, ಡಿಕೆಶಿಗೆ ಎರಡು ಖಾತೆಗಳನ್ನು ಕೊಡಲಾಗಿದೆ. ಆದರೆ, ತಮಗೆ ಒಂದೇ ಖಾತೆ ಕೊಡಲಾಗಿದೆ ಎಂದು ಎಚ್.ಡಿ.ರೇವಣ್ಣ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.


ಸಂಬಂಧಿತ ಟ್ಯಾಗ್ಗಳು

H.D.Revanna portfolio ಇಂಧನ ಖಾತೆ ಲೋಕೋಪಯೋಗಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ