ಕೊನೆಗೂ ಮೈತ್ರಿ ಸರ್ಕಾರದ ಖಾತೆಗಳ ಹಂಚಿಕೆ

Karnataka: portfolios and coalition government

09-06-2018

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಕೊನೆಗೂ ಖಾತೆಗಳ ಹಂಚಿಕೆಯಾಗಿದೆ. ಪ್ರಮುಖ ಖಾತೆಗಳಿಗಾಗಿ ಎರಡೂ ಪಕ್ಷಗಳ ಹಗ್ಗಜಗ್ಗಾಟದ ನಡುವೆ ನಿನ್ನೆ ಅಂತಿಮ ತೀರ್ಮಾನಕ್ಕೆ ಬರಲಾಗಿದ್ದು, ಖಾತೆ ಹಂಚಿಕೆ ಮಾಡಿದ್ದಾರೆ. ಇದರ ನಡುವೆ ಖಾತೆಗಳ ಹಂಚಿಕೆ ನಂತರವೂ ಕೆಲ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಾವು ನಿರೀಕ್ಷಿಸಿದ್ದ ಖಾತೆಗಳು ಸಿಗದಿದ್ದರಿಂದ ಕೆಲ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಹಣಕಾಸು, ಇಂಧನ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ, ಕನ್ನಡ ಮತ್ತು ಸಂಸ್ಕೃತಿ, ಗುಪ್ತಚರ ಸೇರಿದಂತೆ 11 ಖಾತೆಗಳನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ.

ಖಾತೆಗಳ ಹಂಚಿಕೆ ವಿವರ ಈ ಕೆಳಕಂಡಂತಿದೆ.

 • ಜಿ.ಪರಮೇಶ್ವರ – ಗೃಹ, ಯುವಜನಸೇವಾ ಮತ್ತು ಕ್ರೀಡೆ
 • ಡಿ.ಕೆ.ಶಿವಕುಮಾರ್ – ಜಲಸಂಪನ್ಮೂಲ, ವೈದ್ಯಕೀಯ ಶಿಕ್ಷಣ
 • ಎಚ್.ಡಿ.ರೇವಣ್ಣ - ಲೋಕೋಪಯೋಗಿ
 • ಡಿ.ಸಿ ತಮ್ಮಣ್ಣ - ಸಾರಿಗೆ
 • ಕೆ.ಜೆ. ಜಾರ್ಜ್ - ಬೃಹತ್ ಕೈಗಾರಿಕೆ, ಐಟಿ-ಬಿಟಿ
 • ಕೃಷ್ಣ ಬೈರೇಗೌಡ - ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌, ಕಾನೂನು
 • ಪ್ರಿಯಾಂಕ್ ಖರ್ಗೆ - ಸಮಾಜ ಕಲ್ಯಾಣ
 •  ಯು.ಟಿ. ಖಾದರ್ - ನಗರಾಭಿವೃದ್ಧಿ (ಬೆಂಗಳೂರು, ಬಿಬಿಎಂಪಿ ಹೊರತುಪಡಿಸಿ) ವಸತಿ
 • ಆರ್.ವಿ. ದೇಶಪಾಂಡೆ - ಕಂದಾಯ, ಕೌಶಲ್ಯ ಅಭಿವೃದ್ಧಿ
 • ಶಿವಶಂಕರ ರೆಡ್ಡಿ - ಕೃಷಿ
 • ರಮೇಶ್ ಜಾರಕಿಹೊಳಿ - ಪೌರಾಡಳಿತ, ನಗರ, ಸ್ಥಳೀಯ ಸಂಸ್ಥೆ, ಬಂದರು, ಒಳನಾಡು ಸಾರಿಗೆ
 • ಜಮೀರ್ ಅಹ್ಮದ್ - ಆಹಾರ ಮತ್ತು ನಾಗರಿಕ ಪೂರೈಕೆ, ಅಲ್ಪಸಂಖ್ಯಾತ ಕಲ್ಯಾಣ, ವಕ್ಫ್‌
 • ಶಿವಾನಂದ ಪಾಟೀಲ್ - ಆರೋಗ್ಯ
 • ವೆಂಕಟರಮಣಪ್ಪ - ಕಾರ್ಮಿಕ
 • ರಾಜಶೇಖರ್ ಪಾಟೀಲ್ - ಗಣಿ ಮತ್ತು ಭೂ ವಿಜ್ಞಾನ, ಮುಜರಾಯಿ
 • ಪುಟ್ಟರಂಗಶೆಟ್ಟಿ - ಹಿಂದುಳಿದ ವರ್ಗಗಳ ಕಲ್ಯಾಣ
 • ಶಂಕರ್ - ಅರಣ್ಯ, ಪರಿಸರ ವಿಜ್ಞಾನ
 • ಜಯಮಾಲಾ - ಮಹಿಳಾ ಮತ್ತು ಮಕ್ಕಳ ಕಲ್ಯಾಣ
 • ಬಂಡೆಪ್ಪ ಕಾಶೆಂಪುರ - ಸಹಕಾರ
 • ಜಿ.ಟಿ. ದೇವೇಗೌಡ - ಉನ್ನತ ಶಿಕ್ಷಣ
 • ಮನಗೂಳಿ - ತೋಟಗಾರಿಕೆ
 • ಗುಬ್ಬಿ ಶ್ರೀನಿವಾಸ್ - ಸಣ್ಣ ಕೈಗಾರಿಕೆ
 • ವೆಂಕಟರಾವ್ ನಾಡಗೌಡ - ಪಶು ಸಂಗೋಪನಾ
 • ಸಿ.ಎಸ್.ಪುಟ್ಟರಾಜು - ಸಣ್ಣ ನೀರಾವರಿ
 • ಸಾ.ರಾ.ಮಹೇಶ್ - ಪ್ರವಾಸೋದ್ಯಮ, ರೇಷ್ಮೆ
 • ಎನ್.ಮಹೇಶ್ - ಪ್ರಾಥಮಿಕ, ಪ್ರೌಢ ಶಿಕ್ಷಣಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ