ಭಿನ್ನಮತ ಶಮನಕ್ಕೆ ರಾಹುಲ್ ಗಾಂಧಿಗೆ ಮನವಿ!

karnataka congress Mla

08-06-2018

ಬೆಂಗಳೂರು: ಸಚಿವ ಸ್ಥಾನ ಸಿಗದ ಕಾಂಗ್ರೆಸ್ ನ ಅತೃಪ್ತ ಶಾಸಕರ ಮನವೊಲಿಸೋ ಕೆಲಸದಲ್ಲಿ ಕೈ ನಾಯಕರು ನಿರತರಾಗಿದ್ದಾರೆ. ಹೆಚ್.ಕೆ.ಪಾಟೀಲ್ ಮನವೊಲಿಸಲು, ಶಾಸಕ ತನ್ವೀರ್ ಸೇಠ್, ಈಶ್ವರ್ ಖಂಡ್ರೆ ಸೇರಿದಂತೆ ಇತರೆ ನಾಯಕರು ಹೆಚ್.ಕೆ.ಪಾಟೀಲ್ ರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಅಲ್ಲದೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಸಹ ಕರೆ‌ ಮಾಡಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಬೆಳಗ್ಗಿನಿಂದಲೂ ಕೈ ನಾಯಕರು ಹೆಚ್.ಕೆ. ಪಾಟೀಲ್ ನಿವಾಸಕ್ಕೆ ಬರುತ್ತಲೇ ಇದ್ದರು.

ಇದರ ಬೆನ್ನಲ್ಲೇ ಕಾಂಗ್ರೆಸ್ ಶಾಸಕರ ಅಸಮಾಧಾನ ವಿಚಾರ ಹೈಕಮಾಂಡ್ ಅಂಗಳಕ್ಕೆ ಬಂದಿದೆ. ಭಿನ್ನಮತ ಶಮನಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಧ್ಯಪ್ರವೇಶ ಮಾಡುವಂತೆ ಹಿರಿಯ ನಾಯಕರ ಮನವಿ ಮಾಡಿದ್ದಾರೆ. ಅತೃಪ್ತರನ್ನು ಕರೆದು ಮಾತನಾಡಿಸುವಂತೆ ರಾಹುಲ್ ಗಾಂಧಿಗೆ ಸಲಹೆ ಮಾಡಿದ್ದು, ಬಿಕ್ಕಟ್ಟು ಶಮನ ಮಾಡಲು ರಾಹುಲ್ ಗಾಂಧಿ ಮಧ್ಯಪ್ರವೇಶಕ್ಕೆ ಒತ್ತಾಯಿಸಿದ್ದಾರೆ.

 

 

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ