ಅಬಕಾರಿ ಆಯುಕ್ತರನ್ನು ಅಮಾನತುಗೊಳಿಸಿ ಸಿಎಂ ಆದೇಶ!

CM kumaraswamy ordered to suspend Excise Commissioner!

08-06-2018

ಬೆಂಗಳೂರು: ಅಬಕಾರಿ ಆಯುಕ್ತ ಮೌನೀಶ್ ಮೌದ್ಗೀಲ್ ಅಮಾನತಿಗೆ ಸಿಎಂ ಆದೇಶಿಸಿದ್ದಾರೆ. ಚುನಾವಣೆ ಕಾರ್ಯನಿಮಿತ್ತ ವರ್ಗಾವಣೆಗೊಂಡಿದ್ದ ಅಬಕಾರಿ ಸಿಬ್ಬಂದಿಗಳನ್ನು ಮೂಲಸ್ಥಾನಕ್ಕೆ ವರ್ಗಾಯಿಸಲು ಆಯುಕ್ತರ ಹಿಂದೇಟು ಹಾಕುತ್ತಿದ್ದರು ಎಂಬ ದೂರು ಕೇಳಿ ಬಂದ ಹಿನ್ನೆಲೆ, ಈ ನಿರ್ಣಯ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಕೆಲ ದಿನಗಳ ಹಿಂದೆ ಮೂಲಸ್ಥಾನಕ್ಕೆ ಸಿಬ್ಬಂದಿಗಳನ್ನು ವರ್ಗಾಯಿಸಲು ಸರ್ಕಾರದಿಂದಲೇ ಆದೇಶ ಹೊರಡಿಸಲಾಗಿತ್ತು. ಆದರೆ, ಸರ್ಕಾರದ ಆದೇಶವನ್ನು ಧಿಕ್ಕರಿಸಿದ್ದ ಮೌನೀಶ್ ಮೌದ್ಗಿಲ್ ವರ್ಗಾವಣೆಗೆ ಮಾಡಿರಲಿಲ್ಲ.

ಇಂದು ಸಿಎಂ ಬಳಿ ಅಬಕಾರಿ ಮಹಿಳಾ ಸಿಬ್ಬಂದಿಗಳು ಮೂಲಸ್ಥಾನಕ್ಕೆ ವರ್ಗಾವಣೆಗಾಗಿ ಮನವಿ ಮಾಡಲು ಬಂದಿದ್ದು, ಸಿಎಂ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಈ ವೇಳೆ ಸಿಎಂ ಕುಮಾರ ಸ್ವಾಮಿ, ‘ಇನ್ನೂ ಕೂಡ ವರ್ಗಾವಣೆ ಆಗಿಲ್ಲವೇ’ ಎಂದು ಆಶ್ಚರ್ಯದಿಂದ ಕೇಳಿದ್ದಾರೆ.

ಇದೇ ವೇಳೆ ವರ್ಗಾವಣೆ ಮಾಡಲಾಗುವುದಿಲ್ಲ ಎಂದು ಆಯುಕ್ತರ ಹೇಳಿಕೆಯನ್ನು ಮಹಿಳಾ ಸಿಬ್ಬಂದಿ ಸಿಎಂ ಬಳಿ ಹೇಳಿದ್ದು, ತಕ್ಷಣ ಸ್ಥಳದಲ್ಲೇ ಇದ್ದ ಕಾರ್ಯದರ್ಶಿಗೆ ಅಮಾನತು ಮಾಡುವಂತೆ ಸಿಎಂ ಸೂಚಿಸಿದ್ದಾರೆ. ಸರ್ಕಾರಕ್ಕಿಂತ ಐಎಎಸ್ ಆಫೀಸರ್ ದೊಡ್ಡವರಾ? ಎಂದು ಕಿಡಿಕಾರಿದ್ದಾರೆ.

ಅಧಿಕಾರಿಗಳಿಗೆ ಹಿರಿತನವಿದ್ದರಷ್ಟೇ ಸಾಲದು ಮಾನವೀಯತೆಯೂ ಬೇಕು. ಸರ್ಕಾರಕ್ಕಿಂತ ಯಾರೂ ದೊಡ್ಡವರಲ್ಲ ಎಂದರು ಸಿಎಂ. ಚುನಾವಣೆ ವೇಳೆಯಲ್ಲಿ ಹಲವಾರು ಅಧಿಕಾರಿಗಳನ್ನು ವರ್ಗ ಮಾಡಲಾಗಿರುತ್ತದೆ. ಚುನಾವಣೆ ನಂತರ ಮೊದಲಿನ ಸ್ಥಳಗಳಿಗೆ ಕಳುಹಿಸಬೇಕು. ಹಲವಾರು ಹೆಣ್ಣುಮಕ್ಕಳು ತಮ್ಮ ಕಷ್ಟಗಳನ್ನು ಹೇಳಿಕೊಂಡು ಬಂದಿದ್ದಾರೆ. ಹಿರಿಯ ಅಧಿಕಾರಿಗಳು ಪ್ರಾಮಾಣಿಕತೆ ಜೊತೆಗೆ ಮಾನವೀಯತೆ ಕೂಡಾ ಹೊಂದಿರಬೇಕು ಎಂದು ಕಿವಿ ಮಾತು ಹೇಳಿ ಸರ್ಕಾರಕ್ಕಿಂತ ಯಾರೂ ದೊಡ್ಡವರಲ್ಲ ಎಂಬ ಸಂದೇಶ ಸಾರಿದ್ದಾರೆ.


ಸಂಬಂಧಿತ ಟ್ಯಾಗ್ಗಳು

H.D.Kumaraswamy transfer ಮಾನವೀಯತೆ ಐಎಎಸ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ