ರಾಜ್ಯದ ನೀರಾವರಿ ಇಲಾಖೆ ಅತಿಹೆಚ್ಚು ಭ್ರಷ್ಟವಾಗಿದೆ !

Kannada News

25-05-2017

ಹುಬ್ಬಳ್ಳಿ:- ರಾಜ್ಯದ ನೀರಾವರಿ ಇಲಾಖೆ ಅತಿಹೆಚ್ಚು ಭ್ರಷ್ಟವಾಗಿದೆ. ಅಕ್ರಮವಾಗಿ ಜಿಂದಾಲ್ ಕಂಪನಿಗೆ ನೀರು ಬಿಟ್ಟಿದ್ದಾರೆ, ಸಚಿವ ಎಮ್.ಬಿ.ಪಾಟೀಲ್ ಅವ್ಯವಹಾರ ಮಾಡಲು ಹೊರಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಂ.ಬಿ.ಪಾಟೀಲ್ ವಿರುದ್ಧ ಹರಿಹಾಯ್ದರು. ಹುಬ್ಬಳ್ಳಿಯಲ್ಲಿ ಜನಸಂಪರ್ಕ ಅಭಿಯಾನದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಬಿ.ಎಸ್.ಯಡಿಯೂರಪ್ಪ ಮಾಧ್ಯಮಗಳೊಂದಿಗೆ ಮಾತನಾಡಿ ನನ್ನ ಬಗ್ಗೆ ವಯಸ್ಸಾಗಿದೆ ಎಂದು ಹಗುರವಾಗಿ ಮಾತನಾಡಿದ್ದಾರೆ. ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ವಾಸ್ತವ ತಿಳಿಯಲು ಸಮಿತಿ ರಚಿಸಲಾಗಿದೆ. ಎಚ್.ಕೆ.ಪಾಟೀಲ್ ಊರಲ್ಲಿ ಜನರಿಗೆ ಕುಡಿಯಲು ನೀರಿಲ್ಲ. ಕುಡಿಯುವ ನೀರಿಗಾಗಿ ಹೋರಾಡಿದ ಬಿಜೆಪಿ ಕಾರ್ಯಕರ್ತರ ಮೇಲೆ ಕ್ರಿಮಿನಲ್ ಕೇಸ್ ಹಾಕಿದ್ದಾರೆ. ಹೋರಾಟ ಹತ್ತಿಕ್ಕಲು ಬಿಜೆಪಿ ಕಾರ್ಯಕರ್ತರ ಮೇಲೆ ಕ್ರಿಮಿನಲ್ ಕೇಸ್ ಹಾಕಿದ್ದಾರೆ. ಸರ್ಕಾರದ ದೌರ್ಜನ್ಯ ಖಂಡಿಸಿ, ಕುಡಿಯುವ ನೀರಿಗೆ ಆಗ್ರಹಿಸಿ ಹೋರಾಟ ನಡೆಸಲಾಗುವುದು ಎಂದರು. ನಾಳೆ ಗದಗ್‌ನಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಮಾಡುತ್ತೇವೆ. ರಾಜ್ಯ ಸರ್ಕಾರ ಹಗಲು ದರೋಡೆ ನಡೆಸಿದ್ದು, ತುಘಲಕ್ ದರ್ಬಾರ್ ಮಾಡುತ್ತಿದೆ ಎಂದು ತಿಳಿಸಿದರು. ಕುಮಾರಸ್ವಾಮಿ ಕುರಿತು ಪ್ರತಿಕ್ರಿಯಿಸಿದ ಅವರು ಜೆಡಿಎಸ್ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿಯವರು ಹೀಗೇಕೆ ಮಾತನಾಡುತ್ತಾರೆ ಅರ್ಥವಾಗುತ್ತಿಲ್ಲ. ವೆಂಕಟೇಶ್ ಗೌಡ ಎಂಬಾತ ಐಟಿಗೆ ದೂರು ಕೊಟ್ಟಿದ್ದಾನೆ. ಬಿಜೆಪಿ ಕಚೇರಿಯಲ್ಲಿ ಪತ್ರ ಟೈಪ್ ಮಾಡಲಾಗಿದೆ ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ. ಕುಮಾರಸ್ವಾಮಿಯವರು ತಾವು ತಪ್ಪಿತಸ್ಥರಲ್ಲ ಎಂಬುದನ್ನು ಸಾಬೀತು ಮಾಡಲಿ. ಇಲ್ಲವೇ ಆರೋಪಿಸಿದವರ ವಿರುದ್ಧ ಕಾನೂನು ಹೋರಾಟ ಮಾಡಲಿ. ವೆಂಕಟೇಶ್ ಗೌಡ ನಮ್ಮವನು ಎಂದು ಕುಮಾರಸ್ವಾಮಿ ಸಾಬೀತು ಮಾಡಲಿ. ನಾನು ಅವರ ಮನೆಗೆ ಹೋಗಿ ಕ್ಷಮೆ ಕೇಳಲು ಸಿದ್ಧ. ಪ್ರಚಾರಕ್ಕಾಗಿ ಹಿಟ್ ಆಂಡ್ ರನ್ ಮಾಡುವುದು ಬೇಡ. ಹೋದಲ್ಲೆಲ್ಲ ಬಿಜೆಪಿಗೆ ದಲಿತರ ಅಪಾರ ಬೆಂಬಲ ಸಿಗುತ್ತಿದೆ ಎಂಬ ಕಾರಣಕ್ಕೆ. ಹೊಟ್ಟೆಕಿಚ್ವಿನಿಂದ ಕುಮಾರಸ್ವಾಮಿ ಮನಬಂದಂತೆ ಹೇಳಿಕೆ ಕೊಡುತ್ತಿದ್ದಾರೆ ಎಂದರು.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ