ಭೀಕರ ಅಪಘಾತ ಬಿಕಾಂ ವಿದ್ಯಾರ್ಥಿ ಸಾವು

Horrific accident a B.com student died

08-06-2018

ಬೆಂಗಳೂರು: ಎಲೆಕ್ಟ್ರಾನಿಕ್‍ಸಿಟಿಯ 2ನೇ ಹಂತದ ಮೇಲುಸೇತುವೆ ಬಳಿ ವೇಗವಾಗಿ ಹೋಗುತ್ತಿದ್ದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಉರುಳಿಬಿದ್ದು ಬಿಕಾಂ ವಿದ್ಯಾರ್ಥಿಯೊಬ್ಬರು ಮೃತಪಟ್ಟರೆ ಚಾಲಕ ಸೇರಿ ಮೂವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಮೃತಪಟ್ಟವರನ್ನು ದೊಡ್ಡಕಲ್ಲಹಳ್ಳಿಯ ರಾಕೇಶ್(21) ಎಂದು ಗುರುತಿಸಲಾಗಿದೆ. ದುರ್ಘಟನೆಯಲ್ಲಿ ಮೂವರು ಪಾರಾಗಿದ್ದು ಅಪಘಾತಕ್ಕೆ ಕಾರಣನಾಗಿದ್ದ ಕಾರು ಚಾಲಕ ರುದ್ರೇಶ್ ಪರಾರಿಯಾಗಿದ್ದಾನೆ. ಕೋರಮಂಗಲದ ರೆಡ್ಡಿ ಕಾಲೇಜಿನಲ್ಲಿ ದ್ವಿತಿಯ ಬಿಕಾಂ ಪದವಿ ಓದುತ್ತಿದ್ದ ರಾಕೇಶ್ ನಿನ್ನೆ ಸಂಜೆ 6ರ ವೇಳೆ ಸ್ನೇಹಿತರೊಂದಿಗೆ ತಮ್ಮ ಮಾರುತಿ ರಿಡ್ಜ್ ಕಾರಿನಲ್ಲಿ ಕಾಲೇಜಿನಿಂದ ಮನೆಗೆ ಹೋಗುತ್ತಿದ್ದರು.

ಮಾರ್ಗ ಮಧ್ಯೆ ಎಲೆಕ್ಟ್ರಾನಿಕ್‍ಸಿಟಿಯ 2ನೇ ಹಂತದ ಮೇಲುಸೇತುವೆ ಬಳಿ ವೇಗವಾಗಿ ಹೋದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಉರುಳಿಬಿದ್ದು ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ರಾಕೇಶ್ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡರು ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ನೀಡಿದ ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ ಮೃತಪಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಎಲೆಕ್ಟ್ರಾನಿಕ್‍ಸಿಟಿ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಅನುಪಮ್ ಅಗರ್‍ವಾಲ್ ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ