ಗುರೂಜಿಗೆ ದೇವೇಗೌಡ್ರು-ರಮೇಶ್ ಕುಮಾರ್ ಪಾದಪೂಜೆ

H.D devegowda and speaker ramesh kumar pooja viral on social media!

08-06-2018

ಬೆಂಗಳೂರು: ಎರಡು ವರ್ಷಗಳು ಹಿಂದೆಯೇ ಹೆಚ್.ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದ ಬಾಲ ಗುರೂಜಿ ವಿನಯ್ ಸ್ವಾಮೀಜಿಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಪಾದ ಪೂಜೆ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ನಗೆ ಪಾಟಲಿಗೆ ಕಾರಣವಾಗಿದೆ.

ದತ್ತಾತ್ರೆಯ ಅವಧೂತ ಸ್ವರೂಪ ಎಂದೇ ಖ್ಯಾತಿ ಪಡೆದಿರುವ ವಿನಯ್ ಗುರೂಜಿಯನ್ನು ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ಬಳಿಕ ದೇವೇಗೌಡ ದಂಪತಿ ತಮ್ಮ ನಿವಾಸಕ್ಕೆ ಕರೆಸಿ ಪಾದಪೂಜೆ ಮಾಡಿದ್ದಾರೆ. ಈ ಗುರೂಜಿ ಹಲವು ರಾಜಕೀಯ ನಾಯಕರಿಗೆ ರಾಜಕೀಯ ಭವಿಷ್ಯ ಹೇಳಿದ್ದರು. 2 ವರ್ಷದ ಹಿಂದೆಯೇ ಹೆಚ್ಡಿಕೆಗೆ ನೀವು ಸಿಎಂ ಆಗುತ್ತೀರಿ ಎಂದು ಹೇಳಿ ಹಸಿರು ಶಲ್ಯೆ ನೀಡಿ ಮನೆಯಲ್ಲಿ ಪೂಜೆ ಮಾಡುವುದಕ್ಕೆ ಹೇಳಿದ್ದರಂತೆ. ಆದ್ದರಿಂದ ಅವರು ಹೇಳಿದ ಹಾಗೇ ಕುಮಾರಸ್ವಾಮಿ ಸಿಎಂ ಆಗಿದ್ದು, ಈಗ ಅವರಿಗೆ ದೇವೇಗೌಡರು ಪಾದಪೂಜೆ ನೆರವೇರಿಸಿದ್ದಾರೆ.

ಸ್ಪೀಕರ್ ರಮೇಶ್ ಕುಮಾರ್ ಅವರಿಗೂ ನೀವು ಸತತ 2ನೇ ಬಾರಿಗೆ ಶಾಸಕರಾಗುತ್ತಾರೆ ಎಂದು ಬಾಲ ಗುರೂಜಿ ಹೇಳಿದ್ದರಂತೆ. ಈಗ ಅವರು ಕೂಡ ಪಾದಪೂಜೆ ಮಾಡಿದ್ದಾರೆ. ಸ್ಪೀಕರ್ ರಮೇಶ್ ಕುಮಾರ್, ವಿನಯ್ ಗುರೂಜಿಗೆ ಪೂಜೆ ಮಾಡಿರುವುದು ವೈರಲ್ ಆಗಿದೆ.

ಈ ಮಧ್ಯೆ ಮುಖ್ಯಮಂತ್ರಿ ಕುಮಾರಸ್ವಾಮಿ ಮನೆಯಲ್ಲಿ ಚಂಡಿಕಾ ಪಾರಾಯಣ ನಡೆದಿದೆ. ಜೆಪಿ ನಗರದಲ್ಲಿರುವ ಮನೆಯಲ್ಲಿ ಪೂಜೆ ಪುನಸ್ಕಾರ ನಡೆಸುತ್ತಿದ್ದಾರೆ. ಕುಮಾರಸ್ವಾಮಿ ಸಿಎಂ ಆದ ಬಳಿಕ ವಾರಕ್ಕೊಂದು ಸಲ ಪೂಜೆ ನಡೆಯುತ್ತಿರುವುದು ವಿಶೇಷವಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಅಧಿಕೃತ ಕಾರ್ಯಕ್ರಮಗಳಲ್ಲಿ ಕುಮಾರಸ್ವಾಮಿ ಪಾಲ್ಗೊಳ್ಳುತ್ತಿಲ್ಲ. ಆದರೆ, ಜೆಪಿ ನಗರದ ನಿವಾಸದಲ್ಲಿ ಜನತಾ ದರ್ಶನ ಕೈಗೊಂಡು ಅಹವಾಲು ಸ್ವೀಕರಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ