ಕೇರಳ ಪೊಲೀಸರಿಂದ ಯುವತಿಗೆ ಲೈಂಗಿಕ ದೌರ್ಜನ್ಯ!

Sexual assault on girl from Kerala police!

08-06-2018 334

ಬೆಂಗಳೂರು: ಅಪರಾಧ ಪ್ರಕರಣದ ತನಿಖೆಗಾಗಿ ನಗರಕ್ಕೆ ಬಂದಿದ್ದ  ಕೇರಳ ಪೊಲೀಸ್ ಸಬ್‍ ಇನ್ಸ್ಪೆಕ್ಟರ್ ಸೇರಿ ಇಬ್ಬರು ಪೊಲೀಸರು ನಗರದ ಯುವತಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಹೀನ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.

ಅಪರಾಧ ಪ್ರಕರಣದ ತನಿಖೆಗಾಗಿ ಮೇ 27ರಂದು ವಿವೇಕ ನಗರಕ್ಕೆ ಆಗಮಿಸಿದ್ದ ಕೇರಳದ ಇಡುಕ್ಕಿಯ ಪಿಎಸ್ಐ ಅರುಣ್ ನಾರಾಯಣ ಹಾಗೂ ಇನ್ನಿಬ್ಬರು ಪೊಲೀಸರು ತನ್ನ ಮೇಲೆ ಹಲ್ಲೆ ನಡೆಸಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಸಂತ್ರಸ್ಥ ಯುವತಿ ವಿವೇಕನಗರ ಪೊಲೀಸರಿಗೆ ದೂರು ನೀಡಿದ್ದಾರೆ.

ಕೇರಳ ಇಡುಕ್ಕಿಯ ಸಿಬಿ ಸಿಐಡಿ ಪೊಲೀಸರು ತನಿಖೆ ಮೇಲೆ ವ್ಯಕ್ತಿಯೊಬ್ಬನ ವಿಚಾರಣೆಗಾಗಿ ವಿವೇಕನಗರದ ಕಚೇರಿಗೆ ಬಂದಿದ್ದರು. ಈ ವೇಳೆ ಆ ಕಚೇರಿಯಲ್ಲೇ ಕೆಲಸ ಮಾಡುತ್ತಿದ್ದ ಯುವತಿ ಪೊಲೀಸರನ್ನು ಕಚೇರಿ ಒಳಗೆ ಬಿಡಲು ನಿರಾಕರಿಸಿದ್ದಾರೆ.

ಯುವತಿಯ ಮೇಲೆ ಕೋಪಗೊಂಡ ಕೇರಳ ಪೊಲೀಸರು ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಕೂಡ ಎಸಗಿದ್ದಾರೆ. ಮೊದಲು ಯುವತಿ ಕೇರಳ ಪೊಲೀಸರ ವಿರುದ್ಧ ವಿವೇಕನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಲು ಮುಂದಾದರು. ಆದರೆ ಪೊಲೀಸರು ಮೊದಲಿಗೆ ಕೇರಳ ಪೊಲೀಸರ ವಿರುದ್ಧ ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ.

ದೂರು ದಾಖಲಿಸಿಕೊಳ್ಳದ ಕಾರಣ ಸಂತ್ರಸ್ತ ಯುವತಿ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿದ್ದಾರೆ. ಹಿರಿಯ ಅಧಿಕಾರಿಗಳ ಅಣತಿಯಂತೆ ಪೊಲೀಸರು ಈಗ ದೂರು ಸ್ವೀಕರಿಸಿದ್ದು, ಐಪಿಸಿ ಸೆಕ್ಷನ್ 354 ಎ, 506, 34, 504 ಅಡಿಯಲ್ಲಿ ಕೇಸ್ ದಾಖಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ