ಪೊಲೀಸ್ ಭದ್ರತೆಯಲ್ಲಿ ‘ಕಾಲಾ’ ಪ್ರದರ್ಶನ

Kaala shows started with police protection!

08-06-2018

ಬೆಂಗಳೂರು: ರಜನಿಕಾಂತ್ ಅಭಿನಯದ ಕಾಲಾ ಚಿತ್ರ ಕರ್ನಾಟಕದದ ವಿವಿಧೆಡೆ ಹೊರತು ಪಡಿಸಿ ನಿನ್ನೆ ಎಲ್ಲೆಡೆ ಬಿಡುಗಡೆಯಾಗಿತ್ತು. ರಾಜ್ಯದಲ್ಲಿ ಹಲವೆಡೆ ಪ್ರತಿಭಟನೆಗಳು ನಡೆಯುವ ಮುನ್ಸೂಚನೆಗಳಿಂದ ಬೆಳಗಿನ ಪ್ರದರ್ಶನಗಳನ್ನು ರದ್ದು ಮಾಡಲಾಗಿತ್ತು. ಸಂಜೆಯಾಗುತ್ತಿದ್ದಂತೆ ನಗರದ ಬಹುತೇಕ ಕಡೆ ಪ್ರದರ್ಶನಗಳು ಪ್ರಾರಂಭವಾಗಿದ್ದವು. ಇನ್ನು ಕೆಲವು ಮಲ್ಟಿಪ್ಲೆಕ್ಸ್ಗಳು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದರು. ಪರಿಸ್ಥಿತಿ ನೋಡಿಕೊಂಡು ಪ್ರದರ್ಶನಕ್ಕೆ ಅವಕಾಶ ಮಾಡುವುದಾಗಿ ಹೇಳಿದ್ದರು, ಇದೆಲ್ಲಾ ನಿನ್ನೆಯ ಕಥೆಯಾದರೆ. ಇಂದು ಗಾಂಧಿನಗರದಲ್ಲಿ ಶುರುವಾಗಿದೆ ಕಾಲಾ ಹವಾ. ಕೆ.ಜಿ ರಸ್ತೆಯ ಪ್ರಮುಖ ಚಿತ್ರಮಂದಿರವಾದ ಭೂಮಿಕಾದಲ್ಲಿ ಬೆಳಿಗ್ಗೆ 10.30ಕ್ಕೆ ಪ್ರದರ್ಶನ ಆರಂಭವಾಗಿದೆ. ಭೂಮಿಕಾ‌ ಥಿಯೇಟರ್‌ ಮುಂದೆ ರಾರಾಜಿಸುತ್ತಿವೆ ಕಾಲಾ ಪೋಸ್ಟರ್ ಗಳು. ಇನ್ನು ಮುಂಜಾಗ್ರತಾಕ್ರಮವಾಗಿ ಚಿತ್ರಮಂದಿರಕ್ಕೆ ಬಿಗಿ ಪೋಲಿಸ್ ಬಂದೋಬಸ್ತ್ ‌ನೀಡಲಾಗಿದೆ. ಆನ್‌ಲೈನ್‌ನಲ್ಲೂ ಕೂಡ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ.


ಸಂಬಂಧಿತ ಟ್ಯಾಗ್ಗಳು

Kaala gandhi Nagar ಪ್ರದರ್ಶನ ಮಲ್ಟಿಪ್ಲೆಕ್ಸ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ