ಸಚಿವೆಯಾಗಿದ್ದು ಅಚ್ಚರಿ ಮೂಡಿಸಿದೆ: ಜಯಮಾಲಾ

karnataka: cabinet minister Jayamala

07-06-2018

ಬೆಂಗಳೂರು: ಬದುಕಿನಲ್ಲಿ ಅನೇಕ ಅಚ್ಚರಿಗಳು ನಡೆಯುತ್ತವೆ. ಕೆಲವು ನನಗೆ ನಾನೇ ನಂಬಲಾರದಷ್ಟು ವಿಸ್ಮಯವಾಗಿ ಕಂಡಿವೆ. ಕೆಲವು ಅಚ್ಚರಿಗಳು ಸಂತೋಷವನ್ನು ಉಂಟುಮಾಡಿದರೆ, ಇನ್ನು ಕೆಲವು ಭಯ ಆತಂಕವನ್ನು ಹುಟ್ಟಿಸಿವೆ ಎಂದು ನೂತನ ಸಚಿವೆ ಜಯಮಾಲ ಹೇಳಿದ್ದಾರೆ.

ನಾನು ಬಯಸದೆ ನಟಿಯಾದೆ, ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷಳಾದೆ, ಕರ್ನಾಟಕ ವಿಧಾನಪರಿಷತ್ತಿನ ಸದಸ್ಯಳಾದೆ. ನನ್ನ ಬದುಕಿನಲ್ಲಿ ಇದೆಲ್ಲಾ ಅಚ್ಚರಿಗಳೆ. ಈ ಅಚ್ಚರಿಗಳ ಸಾಲಿಗೆ  ಸೇರ್ಪಡೆ ದಮನಿತರ ಸ್ಥಿತಿಗತಿಗಳ ಅಧ್ಯಯನ ಸಮಿತಿಯ ಅಧ್ಯಕ್ಷತೆ ಹೊಣೆಯನ್ನು ನನಗೆ ವಹಿಸಿದ್ದು ಈಗ ಮತ್ತೊಂದು ಅಚ್ಚರಿ, ಎಂದು ಜಯಮಾಲ ತಿಳಿಸಿದ್ದಾರೆ.

ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಕ್ಯಾಬಿನೆಟ್ ಮಂತ್ರಿಯಾಗಿರುವುದು ಸಂತಸ ತಂದಿದೆ ಎಂದರು ಡಾ.ಜಯಮಾಲಾ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ