ಪೊಲೀಸ್ ಅಧಿಕಾರಿಗಳಿಗೆ ಸಿಎಂ ಕ್ಲಾಸ್

Cm Kumaraswamy had meeting with Police officers

07-06-2018

ಬೆಂಗಳೂರು: ನಿನ್ನೆ ಸಚಿವರ ಪ್ರಮಾಣ ವಚನ ಸ್ವೀಕಾರ ವೇಳೆ ಉಂಟಾದ ಭದ್ರತೆ ವೈಫಲ್ಯ ಹಿನ್ನೆಲೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಮನೆಗೆ ಕರೆಸಿಕೊಂಡು ಸಿಎಂ ಕ್ಲಾಸ್ ತೆಗೆದುಕೊಂಡಿದ್ದಾರೆ.

ಕರ್ತವ್ಯ ಲೋಪ ಆಗಿದ್ದಕ್ಕೆ ಕಿಡಿಕಾರಿದ ಸಿಎಂ, ಡಿಜಿ ಐಜಿಪಿ ನೀಲಮಣಿ‌ ರಾಜು ಅವರ ಬಳಿ ವರದಿ ಕೇಳಿದ್ದಾರೆ. ಕಮಿಷನರ್ ಟಿ.ಸುನೀಲ್ ಕುಮಾರ್ ಮೇಲೂ ಗರಂ ಆಗಿದ್ದಾರೆ. ವಿಐಪಿ, ವಿವಿಐಪಿಗಳನ್ನು ರಾಜಭವನ ಒಳಗೆ ಬಿಡುವುದರಲ್ಲಿ ನಿನ್ನೆ ವೈಫಲ್ಯವಾಗಿತ್ತು. ಸ್ಪೀಕರ್ ರಮೇಶ್ ಕುಮಾರ್ ರಾಜಭವನ ಪ್ರವೇಶಿಸಲಾಗದೆ ವಾಪಸ್ ತೆರಳಿದ್ದರು. ಜೆಡಿಎಸ್ ಅಧ್ಯಕ್ಷ ದೇವೇಗೌಡರ ಪತ್ನಿ ಚೆನ್ನಮ್ಮ ನಡೆದುಕೊಂಡು ರಾಜಭವನ ಪ್ರವೇಶಿಸಿದ್ದರು.

ಎಂಎಲ್ಸಿ ಶರವಣ ರಾಜಭವನ ಪ್ರವೇಶಿಸಲು ಹರಸಾಹಸ ಪಡಬೇಕಾಯಿತು. ಈ ಎಲ್ಲ ಅವ್ಯವಸ್ಥೆ ಪ್ರಶ್ನಿಸಿ ಸ್ಪೀಕರ್ ಕೂಡ ಸರ್ಕಾರಕ್ಕೆ ಪತ್ರ ಬರೆದಿದ್ದರು. ಪ್ರಮಾಣ ವಚನದ ವೇಳೆ ಟ್ರಾಫಿಕ್ ನಿಯಂತ್ರಣದಲ್ಲೂ ವಿಫಲವಾಗಿದ್ದು. ಭದ್ರತಾ ವೈಫಲ್ಯಕ್ಕೆ ಸೂಕ್ತ ವರದಿ ಕೊಡುವಂತೆ ಸೂಚಿಸಿ ತರಾಟೆಗೆ ತೆಗೆದುಕೊಂಡರು.

 

 


ಸಂಬಂಧಿತ ಟ್ಯಾಗ್ಗಳು

H.D.Kumaraswamy Police ವೈಫಲ್ಯ ತರಾಟೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ