ಎಚ್ಚರ ನಿಮ್ಮ ಡೆಬಿಟ್ ಕಾರ್ಡ್ ಬೇರಾರು ಬಳಸುವಂತಿಲ್ಲ!

debit card and bank rules!

07-06-2018

ಬೆಂಗಳೂರು: ಬ್ಯಾಂಕಿನ ಖಾತೆದಾರರು ತನ್ನನ್ನು ಹೊರತು ಪಡಿಸಿ ಸಂಗಾತಿ, ಸಂಬಂಧಿಕರು ಹಾಗೂ ಸ್ನೇಹಿತರೂ ಡೆಬಿಟ್ ಕಾರ್ಡ್ ಬಳಸಿ ಹಣ ಡ್ರಾ ಮಾಡಿದರೇ ಭಾರೀ ಬೆಲೆಯನ್ನೇ ತೆರಬೇಕಾಗುತ್ತದೆ ಎಂದು ಕೋರ್ಟ್ ಕಟ್ಟು ನಿಟ್ಟಿನ ಆದೇಶ ನೀಡಿದೆ.

ಬ್ಯಾಂಕಿನ ನಿಯಾಮಾವಳಿಗಳ ಪ್ರಕಾರ ಡೆಬಿಟ್ ಕಾರ್ಡ್ ಹೊಂದಿರುವ ಖಾತೆದಾರನನ್ನು ಹೊರತು ಪಡಿಸಿ, ಇತರೆ ಯಾವುದೇ ವ್ಯಕ್ತಿಗಳು ಎಟಿಎಂ ನಿಂದ ಹಣ ಡ್ರಾ ಮಾಡುವಂತಿಲ್ಲ ಎಂಬ ನಿಯಮವನ್ನು ಗ್ರಾಹಕ ವ್ಯಾಜ್ಯಗಳ ಇತ್ಯರ್ಥ ವೇದಿಕೆ ಎತ್ತಿ ಹಿಡಿದಿದೆ. 2013ರಲ್ಲಿ ನಡೆದ ಪ್ರಕರಣಕ್ಕೆ ಸಂಬಂಧವಾಗಿ ಕೋರ್ಟ್ ಸುದೀರ್ಘ ವಿಚಾರಣೆ ನಡೆಸಿ ಬ್ಯಾಂಕ್‍ನ ಪರವಾಗಿ ತೀರ್ಪು ನೀಡಿದೆ. ಇದರಿಂದ ಹೆರಿಗೆ ರಜೆಯಲ್ಲಿದ್ದ ಮಹಿಳೆಯೊಬ್ಬರು ಪತಿಗೆ ಎಟಿಎಂ ಕಾರ್ಡ್ ನೀಡಿ 25 ಸಾವಿರ ಡ್ರಾ ಮಾಡುವಂತೆ ಹೇಳಿದ್ದ ಹಣವನ್ನು ಕಳೆದುಕೊಂಡಿದ್ದಾರೆ.

ಪ್ರಕರಣದ ವಿವರ: ಕಳೆದ 2013ರಲ್ಲಿ ಮಾರತ್ತಹಳ್ಳಿ ನಿವಾಸಿಯಾದ ವಂದನಾ ಹೆರಿಗೆ ರಜೆಯಲ್ಲಿದ್ದರು. ತುರ್ತುಗಿ 25ಸಾವಿರ ಹಣ ಡ್ರಾ ಮಾಡಲು ಪತಿಗೆ ತಮ್ಮ ಡೆಬಿಟ್ ಕಾರ್ಡ್ ಮತ್ತು ಪಿನ್ ನೀಡಿದ್ದರು. ಪತಿ ಹತ್ತಿರದ ಎಸ್‍ಬಿಐ ಎಟಿಎಂಗೆ ಹೋಗಿ ಕಾರ್ಡ್ ಹಾಕಿದ್ದಾರೆ. ತಾಂತ್ರಿಕ ತೊಂದರೆಯಿಂದ ಹಣ ಕಡಿತಗೊಂಡು ಎಟಿಎಂನಿಂದ ಹಣ ಪಾವತಿಯಾಗಿರಲಿಲ್ಲ. ಕೇವಲ ಹಣ ಕಡಿತದ ರಸೀದಿ ಮಾತ್ರ ಬಂದಿತ್ತು. ಕೂಡಲೇ ಬ್ಯಾಂಕ್‍ಗೆ ಕರೆ ಮಾಡಿ ವಿಚಾರಿಸಿದಾಗ, ಬ್ಯಾಂಕ್‍ನವರು ಎಟಿಎಂ ಸಮಸ್ಯೆಯಿದ್ದು 24 ಗಂಟೆಯೊಳಗೆ ಹಣ ಮರುಪಾವತಿಯಾಗುತ್ತದೆ ಎಂದು ತಿಳಿಸಿದ್ದರು.

ಆದರೆ ಹಣ ಮರುಪಾವತಿಯಾಗದ ಹಿನ್ನೆಲೆಯಲ್ಲಿ ವಿಚಾರಿಸಿದಾಗ ಸರಿಯಾಗಿ ವಹಿವಾಟು ನಡೆದಿದೆ ಎಂದು ಸಿಬ್ಬಂದಿ ಹೇಳಿ ಕಳುಹಿಸಿದ್ದರು. ಈ ಹಿನ್ನೆಲೆಯಲ್ಲಿ ವಂದಾನರವರು ಎಟಿಎಂ ಕೇಂದ್ರದ ಸಿಸಿಟಿವಿ ರೆಕಾರ್ಡ್ ಪಡೆದು ಪರಿಶೀಲಿಸಿದಾಗ ಎಟಿಎಂನಿಂದ ಹಣ ಬಾರದಿರುವುದನ್ನು ಖಚಿತಪಡಿಸಿಕೊಂಡಿದ್ದಾರೆ. ಈ ವೇಳೆ ಪುನಃ ಬ್ಯಾಂಕ್‍ಗೆ ದೂರು ನೀಡಿದ್ದಾರೆ. ಸಿಸಿಟಿವಿ ರೆಕಾರ್ಡ್ ಪರಿಶೀಲಿಸಿದ ಬ್ಯಾಂಕ್‍ನ ಸಿಬ್ಬಂದಿಯು ಎಟಿಎಂ ಕಾರ್ಡ್ ಬಳಸಿರುವುದು ಬೇರೆ ವ್ಯಕ್ತಿ ಆಗಿದ್ದರಿಂದ ಇದಕ್ಕೆ ನಾವು ಹೊಣೆಗಾರರಲ್ಲ ಎಂದು ಹೇಳಿ ಕಳುಹಿಸಿದ್ದರು.

ಘಟನೆ ಕುರಿತು ಗ್ರಾಹಕ ವ್ಯಾಜ್ಯಗಳ ಇತ್ಯರ್ಥ ವೇದಿಕೆಗೆ ವಂದಾನರವರು ಮೊರೆ ಹೋಗಿದ್ದರು. ಅಲ್ಲದೆ ಅಂದು ಎಂಟಿಎಂನಲ್ಲಿ ಹೆಚ್ಚುವರಿ ಹಣ ಉಳಿದಿರುವುದನ್ನು ಕೋರ್ಟ್‍ನ ಗಮನಕ್ಕೆ ತಂದಿದ್ದರು. ಆದರೆ ಎಸ್‍ಬಿಎಂ ಪರ ವಕೀಲರು ಬ್ಯಾಂಕ್ ನಿಯಮಾವಳಿಗಳ ಪ್ರಕಾರ ಖಾತೆದಾರರು ತಮ್ಮ ಡೆಬಿಟ್ ಕಾರ್ಡ್ ಮತ್ತು ಪಿನ್ ಅನ್ನು ಇತರೇ ಯಾರಿಗೂ ಕೊಡಬಾರದು ಎಂದು ತಿಳಿಸಿದ್ದರು. ಅಲ್ಲದೇ ಡ್ರಾ ಮಾಡುವ ವೇಳೆ ಯಾವುದೇ ತೊಂದರೆಯಾದರೆ ಆದರೆ ಅದಕ್ಕೆ ಖಾತೆದಾರರೇ ಹೊಣೆ ಎಂದು ತಿಳಿಸಿತ್ತು ಎಂಬುದನ್ನು ಕೋರ್ಟ್ ಗಮನಕ್ಕೆ ತಂದರು. ಎಟಿಎಂನಲ್ಲಿ ಹೆಚ್ಚಿನ ಉಳಿಕೆ ಇಲ್ಲವೆಂದು ದಾಖಲೆ ನೀಡಿ, ವಂದನಾರವರ ಖಾತೆಯಿಂದ ಹಣ ಡ್ರಾ ಆಗಿರುವ ಕುರಿತು ದಾಖಲೆಗಳನ್ನು ಕೋರ್ಟ್‍ಗೆ ನೀಡಿತ್ತು.

ಸುಧೀರ್ಘ 3 ವರ್ಷಗಳ ವಿಚಾರಣೆ ನಡೆಸಿ ಕೋರ್ಟ್ ಬ್ಯಾಂಕ್ ಪರ ತೀರ್ಪು ನೀಡಿದೆ. ವಂದನಾರವರು ಪತಿಗೆ ಚೆಕ್ ಅಥವಾ ಇತರೆ ಯಾವುದೇ ಅಧಿಕೃತ ಪತ್ರ ನೀಡಿ ಹಣ ಡ್ರಾ ಮಾಡಿಕೊಳ್ಳುವ ಅಧಿಕಾರ ಇದೆಯೇ ಹೊರತು, ತಮ್ಮ ಡೆಬಿಟ್ ಕಾರ್ಡ್ ಮತ್ತು ಪಿನ್ ನೀಡಿ ಎಟಿಎಂನಿಂದ ಹಣ ಡ್ರಾ ಮಾಡಿಕೊಳ್ಳುವ ಹಾಗಿಲ್ಲ ಎಂದು ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ. ಎಟಿಎಂನಲ್ಲಿ ಹೆಚ್ಚುವರಿ 25ಸಾವಿರ ಹಣ ಇದ್ದರೂ, ತಮ್ಮ ಸಣ್ಣ ತಪ್ಪಿನಿಂದಾಗಿ ವಂದನಾರವರು ಪತಿಗೆ ಡೆಬಿಟ್ ಕಾರ್ಡ್ ನೀಡಿ ಹಣ ಕಳೆದುಕೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Debit card Bank ಕೋರ್ಟ್ ಎಂಟಿಎಂನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ